ಮಡಿಕೇರಿ, ಅ. ೧೯: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ತಾ. ೨೧ ರಂದು (ನಾಳೆ) ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯಲಿದೆ.

ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಬೆಳಿಗ್ಗೆ ೮.೨೮ ಕ್ಕೆ ನಡೆಯಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿನರಾಳಕರ ಭೀಮರಾವ್ ಲಗಮಪ್ಪ ಭಾಗವಹಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಉಪಸ್ಥಿತಿ ಇರಲಿದ್ದಾರೆ.

ಬೆಳಿಗ್ಗೆ ೮.೩೫ಕ್ಕೆ ಗಣ್ಯರಿಂದ ಪೊಲೀಸ್ ಸ್ಮಾರಕಕ್ಕೆ ಪುಷ್ಪ ಗುಚ್ಚಾರ್ಪಣೆ, ೮.೪೦ಕ್ಕೆ ವಾಲಿ ಫಯರಿಂಗ್, ೮.೪೫ಕ್ಕೆ ಪ್ರಸಕ್ತ ಸಾಲಿನ ಪೊಲೀಸ್ ಹುತಾತ್ಮರ ಸ್ಮರಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.