ಶನಿವಾರಸಂತೆ, ಅ. ೧೯: ಸಮೀಪದ ಎಳನೀರು ಗುಂಡಿಯ ಲೈನ್ಮನೆಯಲ್ಲಿ ವಾಸವಿದ್ದ ಪುಷ್ಪ (೨೭) ಎಂಬ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾರ್ಮಿಕ ಮಹಿಳೆ ಪುಷ್ಪ ಕಳೆದ ೩ ವರ್ಷಗಳಿಂದ ಕಾಫಿ ಎಸ್ಟೇಟ್ನಲ್ಲಿ ಕೂಲಿ ಕೆಲಸ ಮಾಡಿಕೊಂಡು ತನ್ನ ೭ ವರ್ಷದ ಮಗಳೊಂದಿಗೆ ಲೈನ್ಮನೆಯಲ್ಲಿ ವಾಸವಿದ್ದಳು. ಕೌಟುಂಬಿಕ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ತಾ. ೧೫ ರಂದು ವಿಷ ಸೇವಿಸಿ ಒದ್ದಾಡುತ್ತಿದ್ದ ಈಕೆಯನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ತಾ. ೧೭ ರಂದು ರಾತ್ರಿ ಮೃತಪಟ್ಟಿದ್ದಾರೆ. ಈಕೆಯ ತಂದೆ ಗೋಪಾಲ್ನಾಯ್ಕ್ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಠಾಣೆಯ ಸಹಾಯಕ ಠಾಣಾಧಿಕಾರಿ ಶಿವಲಿಂಗ ಅವರು ಕಲಂ ೧೭೪ ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.