ಸೋಮವಾರಪೇಟೆ,ಅ.೧೮: ಶನಿವಾರಸಂತೆ ಪಟ್ಟಣದಲ್ಲಿರುವ ವಾಸದ ಮನೆಯಲ್ಲಿ ಕಳೆದ ನಾಲ್ಕೆöÊದು ವರ್ಷಗಳಿಂದ ಕ್ರಿಶ್ಚಿಯನ್ ಧರ್ಮದ ಬೋಧನೆಯೊಂದಿಗೆ ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ಸ್ಥಳೀಯ ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಶನಿವಾರಸಂತೆಯ ಸರ್ಕಾರಿ ಆಸ್ಪತ್ರೆ ಸಮೀಪವಿರುವ ವಾಸದ ಮನೆಯೊಂದರಲ್ಲಿ ಆಲೂರು ಸಿದ್ದಾಪುರ, ಮಾಲಂಬಿ ವ್ಯಾಪ್ತಿಯಲ್ಲಿ ರುವ ಗಿರಿಜನ ಹಾಡಿಯ ಮಂದಿಯನ್ನು ಕರೆತಂದು, ಹಿಂದೂ ಧರ್ಮ, ದೇವರುಗಳ ಬಗ್ಗೆ ಅಪನಂಬಿಕೆ ಬರುವಂತಹ ಬೋಧನೆ ಮಾಡಿ, ಕ್ರಿಶ್ಚಿಯನ್ ಧರ್ಮಕ್ಕೆ ಬರುವಂತೆ ಆಮಿಷ ಒಡ್ಡಲಾಗುತ್ತಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿರುವ ಬೆನ್ನಲ್ಲೇ, ಶನಿವಾರಸಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಆಲೂರುಸಿದ್ದಾಪುರ, ಮಾಲಂಬಿ ಗಿರಿಜನ ಹಾಡಿಯ ಬಹುತೇಕ ಮಂದಿ ಈ ಮನೆಗೆ ವಾರದ ಪ್ರತಿ ಭಾನುವಾರ ಆಗಮಿಸುತ್ತಿದ್ದು, ಪ್ರಾರ್ಥನೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹಾಡಿಯ ಅಮಾಯಕರನ್ನು ವಿವಿಧ ಆಮಿಷ ತೋರಿ ಮತಾಂತರಕ್ಕೆ ಯತ್ನಿಸಲಾಗು ತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಈ ಹಿಂದಿನಿAದಲೂ ಪೊಲೀಸ್ ಇಲಾಖೆ ಯನ್ನು ಒತ್ತಾಯಿಸುತ್ತಾ ಬಂದಿದ್ದಾರೆ.
ಕಳೆದ ೧೫ ದಿನಗಳ ಹಿಂದಷ್ಟೇ ಸರ್ಕಾರಿ ಆಸ್ಪತ್ರೆ ಸಮೀಪವಿರುವ, ಗ್ರಾ.ಪಂ.ಯಲ್ಲಿ ಹಂಗಾಮಿ ನೀರುಗಂಟಿ ಯಾಗಿರುವ ಮಂಜುನಾಥ್ ಅವರ ಮನೆಗೆ ತೆರಳಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಆಮಿಷದ ಮತಾಂತರಕ್ಕೆ ಯತ್ನಿಸದಂತೆ ಎಚ್ಚರಿಕೆ ನೀಡಿ ಬಂದಿದ್ದಾರೆ.
(ಮೊದಲ ಪುಟದಿಂದ)
ಇದರೊAದಿಗೆ ಸಂಬAಧಿಸಿದ ಇಲಾಖೆಯ ಅನುಮತಿ ಪಡೆಯದೇ ವಾಸದ ಮನೆಯನ್ನು ಪ್ರಾರ್ಥನಾಲಯ ವನ್ನಾಗಿ ಮಾರ್ಪಡಿಸಿ, ಸಾರ್ವಜನಿಕರನ್ನು ಸೇರಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮುಂದೆ ಇಂತಹ ಕ್ರಮಕ್ಕೆ ಮುಂದಾಗದAತೆ ತಿಳುವಳಿಕೆ ನೀಡಿ ಬಂದಿದ್ದರೂ ಮತ್ತದೇ ಚಾಳಿ ಮುಂದುವರೆದಿದೆ ಎಂದು ಸಂಘಟನೆ ಗಳ ಪ್ರಮುಖರು ಆರೋಪಿಸಿದ್ದಾರೆ.
ಇದರ ಮುಂದುವರೆದ ಭಾಗವಾಗಿ ನಿನ್ನೆ ದಿನ ಮಂಜುನಾಥ್ ಮನೆಯಲ್ಲಿ ಸುಮಾರು ೨೦ಕ್ಕೂ ಅಧಿಕ ಮಂದಿ ಪ್ರಾರ್ಥನೆಯಲ್ಲಿ ತೊಡಗಿದ್ದ ಸಂದರ್ಭ ಪೊಲೀಸರು ಧಾಳಿ ನಡೆಸಿದ್ದಾರೆ. ಪ್ರಾರ್ಥನೆಯಲ್ಲಿದ್ದವರು ಮಾಲಂಬಿ, ಆಲೂರುಸಿದ್ದಾಪುರ ವ್ಯಾಪ್ತಿಯ ಗಿರಿಜನರು ಎಂದು ತಿಳಿದುಬಂದಿದೆ.
ಪೊಲೀಸ್ ದೂರು: ಈ ಬಗ್ಗೆ ಶನಿವಾರಸಂತೆಯ ಅಂಜಲಿ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಮಂಜುನಾಥ್ ಮತ್ತು ಕುಟುಂಬದವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವAತೆ ಆಮಿಷವೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇರೆ ಶನಿವಾರಸಂತೆ ಪೊಲೀಸರು ಮಂಜುನಾಥ್ ಸೇರಿದಂತೆ ಆತನ ಪತ್ನಿ ಗಿರಿಜಾ, ಪುತ್ರಿ ಅನುಷಾ ಅವರುಗಳ ವಿರುದ್ಧ ಮೊಕದ್ದಮೆ ದಾಖಲಿಸಿ ಕೊಂಡಿದ್ದು, ಮಂಜುನಾಥ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆ, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಶಿಫಾರಸ್ಸುಗಳ ಮಹಾಪೂರ: ಮತಾಂತರ ಆರೋಪದ ಮೇರೆ ಮಂಜುನಾಥ್‌ನನ್ನು ವಶಕ್ಕೆ ಪಡೆಯುತ್ತಿದ್ದಂತೆ ಪೊಲೀಸ್ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಭಾರೀ ಒತ್ತಡ ಹೇರುವ ಪ್ರಯತ್ನಗಳು ನಡೆದಿವೆ. ರಾಜಕೀಯ ಪಕ್ಷದ ಮುಖಂಡರುಗಳೊAದಿಗೆ ಮೈಸೂರು, ಬೆಂಗಳೂರಿನಿAದಲೂ ಕರೆ ಮಾಡಿ ಮಂಜುನಾಥ್ ಪರವಾಗಿ ಒತ್ತಡ ಹೇರುವ ಪ್ರಯತ್ನಗಳು ನಡೆದಿದ್ದು, ಅಂತಿಮವಾಗಿ ಮೊಕದ್ದಮೆ ದಾಖಲಿಸಿಕೊಂಡ ಪೊಲೀಸರು, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.