ಮಡಿಕೇರಿ, ಅ. ೧೮: ಇತಿಹಾಸ ಪ್ರಸಿದ್ಧ ಬಲಮುರಿ ಅಗಸ್ತೆö್ಯÃಶ್ವರ ಹಾಗೂ ಕಾವೇರಿ ಕಣ್ವಮುನೀಶ್ವರ ದೇವಾಲಯದ ಬಳಿ ಇರುವ ಹಳೆಯ ಸೇತುವೆಗೆ ಭದ್ರತೆಯ ಅಗತ್ಯವಿದೆ. ಶತಮಾನಗಳಿಂದಲೂ ಪವಿತ್ರ ಸ್ಥಳ ಎನಿಸಿಕೊಂಡಿರುವ ಬಲಮುರಿ ಕ್ಷೇತ್ರಕ್ಕೆ ಬಹಳಷ್ಟು ಭಕ್ತರು ಆಗಮಿಸಿ ಪೂಜೆ ಪುನಸ್ಕಾರದಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿಶೇಷವಾಗಿ ಕಾವೇರಿ ತೀರ್ಥೋ ದ್ಭವದ ಮರುದಿನ ಇಲ್ಲಿ ತೀರ್ಥಸ್ನಾನ, ಪಿಂಡ ಪ್ರದಾನ ಕಾರ್ಯಗಳು ನಡೆಯುತ್ತವೆ. ಆದರೆ ಇಲ್ಲಿಗೆ ಆಗಮಿಸಲು ಇರುವ ಸೇತುವೆ ಅಭದ್ರತೆಯಿಂದ ಕೂಡಿದ್ದು, ಅಪಾಯ ಆಹ್ವಾನಿಸುತ್ತಿದೆ.

ಕಿರಿದಾದ ಸೇತುವೆಯ ಎರಡೂ ಬದಿಗಳಲ್ಲೂ ಯಾವುದೇ ರೀತಿಯ ಬ್ಯಾರಿಕೇಡ್‌ಗಳಾಗಲಿ, ರಕ್ಷಣಾ ಗೋಡೆಗಳಾಗಲಿ ನಿರ್ಮಾಣವಾಗದ ಕಾರಣ ವಯಸ್ಕರು, ಮಕ್ಕಳು ಸೇತುವೆ ದಾಟುವಾಗ ಜಾಗ್ರತೆ ವಹಿಸದಿದ್ದರೆ ನದಿಗೆ ಬೀಳುವ ಸಾಧ್ಯತೆಗಳಿವೆ. ತಕ್ಷಣವೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಕಾರ್ಯಪ್ರವೃತ್ತ ರಾಗಬೇಕಾಗಿ ಸ್ಥಳೀಯರ ಪರವಾಗಿ ಮೂರ್ನಾಡಿನ ಪೃಥ್ವಿ ದೇವಯ್ಯ ಒತ್ತಾಯಿಸಿದ್ದಾರೆ.