ಗೋಣಿಕೊಪ್ಪಲು, ಅ. ೧೯: ಅರ್ವತ್ತೊಕ್ಲು ಗ್ರಾಮ ಪಂಚಾಯಿತಿ ಸದಸ್ಯೆ ಹೆಚ್.ಆರ್. ರಮ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಗೋಣಿಕೊಪ್ಪ ಸಮೀಪದ ಕೈಕೇರಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಮ್ಯ ಕಳೆದ ನಾಲ್ಕು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತಾ. ೧೭ ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ನಂತರ ರಮ್ಯ ಸಾವಿಗೆ ಆತನ ಪ್ರಿಯಕರ ಕಾರಣವೆಂದು ಸಹೋದರ ಪೊಲೀಸ್ ದೂರು ನೀಡಿದ್ದರು.

ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಬAಧಿಕರ ಸಮ್ಮುಖದಲ್ಲಿ ರಮ್ಯ ವಾಸವಿದ್ದ ಕೈಕೇರಿ ಬಾಡಿಗೆ ಮನೆಗೆ ತೆರಳಿ ಪರಿಶೀಲನೆ ನಡೆಸಿ ಘಟನೆಗೆ ಸಂಬAಧಿಸಿದ ದಾಖಲೆ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಗೋಣಿಕೊಪ್ಪ ಎಸ್.ಐ. ಸುಬ್ಬಯ್ಯ, ಸಿಬ್ಬಂದಿಗಳಾದ ಮಣಿಕಂಠ, ಶೇಕರ್ ಹಾಗೂ ಗ್ರಾಮದ ಪ್ರಮುಖರು ಈ ವೇಳೆ ಹಾಜರಿದ್ದರು.