ಗೋಣಿಕೊಪ್ಪಲು, ಅ.೧೮: ಕೊಡಗು ಜಿಲ್ಲೆಯಲ್ಲಿ ಸಿ ಮತ್ತು ಡಿ ಲ್ಯಾಂಡ್ಗೆ ಸಂಬAಧಿಸಿದ ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಲ್ಯಾಂಡ್ ಬ್ಯಾಂಕಿಗೆ ಹಸ್ತಾಂತರ ಮಾಡಿ ಆದೇಶ ಮಾಡಲಾಗಿದೆ. ಹಿಂದಿನ ಜಿಲ್ಲಾಧಿಕಾರಿಗಳ ಪ್ರಕರಣದಲ್ಲಿ ಎಲ್ಲಾ ಕಂದಾಯ ದಾಖಲೆಗಳಲ್ಲಿ ಲ್ಯಾಂಡ್ ಬ್ಯಾಂಕ್ಗೆ ಸಂಬAಧಿಸಿದ ಭೂಮಿಯೆಂದು ನಮೂದಿಸಲು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ೧೧ ಸಾವಿರ ಹೆಕ್ಟೇರ್ ಸಿಎನ್ಡಿ ಜಾಗವನ್ನು ಅರಣ್ಯ ಇಲಾಖೆಗೆ ಸೇರಿರುವ ಭೂಮಿಯೆಂದು ಕಂದಾಯ ಇಲಾಖೆ ದಾಖಲೆಗಳಲ್ಲಿ ನಮೂದಿಸಬೇಕೆಂಬ ಆದೇಶವನ್ನು ಇತ್ತೀಚಿನ ದಿನಗಳಲ್ಲಿ ಹೊರಡಿಸ ಲಾಗಿದೆ. ಇದರಿಂದ ಇಲ್ಲಿನ ರೈತರಿಗೆ, ಬೆಳೆಗಾರರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಉಚ್ಚನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹಿರಿಯ ವಕೀಲ, ಕಾಂಗ್ರೆಸ್ ಪಕ್ಷದ ಮಾನವ ಹಕ್ಕು ಆರ್.ಟಿ.ಘಟಕದ ರಾಜ್ಯ ಅಧ್ಯಕ್ಷ ಅಜ್ಜಿಕುಟ್ಟೀರ ಪೊನ್ನಣ್ಣ ತಿಳಿಸಿದ್ದಾರೆ.
ಗೋಣಿಕೊಪ್ಪಲುವಿನ ಸಿಲ್ವರ್ ಸ್ಕೆöÊ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ಹುದಿಕೇರಿ ಭಾಗದ ರೈತರ ಹಾಗೂ ಬೆಳೆಗಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಅರಣ್ಯ ಇಲಾಖೆ, ಕಂದಾಯ ಇಲಾಖೆ ಜೊತೆಗೂಡಿ ನಿರ್ಣಯ ಕೈಗೊಂಡು ಈ ಜಮೀನುಗಳನ್ನು ಸರ್ವೆ ಮಾಡಲು ಮುಂದಾಗಿದೆ. ಜಿಲ್ಲೆಯ ವಿವಿಧ ಭಾಗದಲ್ಲಿ ಸರ್ವೆಕಾರ್ಯ ನಡೆಯುತ್ತಿದೆ. ಉಚ್ಚನ್ಯಾಯಾಲಯ ನೀಡಿರುವ ತೀರ್ಪು ಹಳೆಯ ಸರ್ಕಾರಿ ಆದೇಶ ಮತ್ತು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಸುಭೋದ್ ಯಾದವ್ ನೀಡಿರುವ ಆದೇಶ ಇವೆಲ್ಲವನ್ನು ಗಣನೆಗೆ ತೆಗೆದುಕೊಳ್ಳದೆ ನೀಡಿರುವ ತೀರ್ಪಾಗಿರುತ್ತದೆ. ಸರ್ಕಾರ, ಸರ್ಕಾರಿ ವಕೀಲರಾಗಲಿ ಉಚ್ಚ ನ್ಯಾಯಾಲಯದ ಮುಂದೆ ಈ ಹಳೆಯ ದಾಖಲೆಗಳನ್ನಾಗಲಿ, ಹಳೆಯ ಪ್ರಕರಣಗಳನ್ನಾಗಲಿ ನೀಡಿರುವ ಆದೇಶವನ್ನು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಗಮನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ.
ಇದಕ್ಕೆ ಸರ್ಕಾರಿ ಅಧಿಕಾರಿಗಳೇ ಮೂಲ ಕಾರಣ. ಇಂತಹವುಗಳನ್ನು ಮುಚ್ಚಿಡುವಲ್ಲಿ ಕೆಲವು ಅಧಿಕಾರಿಗಳು ನಿಪುಣರಾಗಿದ್ದಾರೆ. ವಕೀಲರ ಹಾಗೂ ನ್ಯಾಯಾಲಯ, ನ್ಯಾಯಾಧೀಶರ ಗಮನಕ್ಕೆ ತಾರದೆ ಬಂದಿರುವ ಆದೇಶವಾಗಿದೆ. ಇದ್ಯಾವುದನ್ನು ಗಮನಿಸದೆ ನೀಡಿರುವ ತೀರ್ಪನ್ನು ಮತ್ತೆ ಮರುಪರಿಶೀಲಿಸಲು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಹುದಿಕೇರಿ ಭಾಗದ ರೈತರು,ಬೆಳೆಗಾರರು ಮನವಿ ಸಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿ ನಿರ್ಣಯ ಕೈಗೊಂಡು ಶೀಘ್ರದಲ್ಲಿ ಜಿಲ್ಲಾಧಿಕಾರಿಗಳನ್ನು, ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹಾಗೂ ಅಡ್ವಕೇಟ್ ಜನರಲ್ ಇವರುಗಳನ್ನು ಭೇಟಿ ಮಾಡಿ ಉಚ್ಚನ್ಯಾಯಾಲಯ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆ ಮಾಡಲು ಒತ್ತಾಯಿಸುತ್ತೇವೆ. ಅಲ್ಲದೆ ಹಳೆಯ ಜಿಲ್ಲಾಧಿಕಾರಿಗಳ ಆದೇಶ, ಸರ್ಕಾರಿ ಆದೇಶವನ್ನು ಗಣನೆಗೆ ತೆಗೆದುಕೊಂಡು ಯಥಾಸ್ಥಿತಿ ಕಾಪಾಡುವಂತೆ ಒತ್ತಾಯಿಸಲಾಗುವುದು. ಅಲ್ಲಿಯವರೆಗೆ ಇಲಾಖೆಯವರು ನಡೆಸುತ್ತಿರುವ ಸರ್ವೆಕಾರ್ಯವನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಒತ್ತಾಯಿಸುವ ದಾಗಿ ಹೇಳಿದರು. ಸಭೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷರಾದ ಮಿದೇರಿರ ನವೀನ್, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಕಡೇಮಾಡ ಕುಸುಮಾ ಜೋಯಪ್ಪ, ಹುದಿಕೇರಿ ಗ್ರಾಮದ ಮುಖಂಡರಾದ ಚಂಗುಲAಡ ಸೂರಜ್, ಮುಂತಾದವರು ಉಪಸ್ಥಿತರಿದ್ದರು.