ಸೋಮವಾರಪೇಟೆ,ಅ.೧೮: ಸೋಮವಾರಪೇಟೆ-ಶನಿವಾರಸಂತೆ ರಾಜ್ಯ ಹೆದ್ದಾರಿಯ ಗೌಡಳ್ಳಿಯಲ್ಲಿ ರಸ್ತೆ ಮಧ್ಯೆಯೇ ಲಾರಿಯೊಂದು ಕೆಟ್ಟುನಿಂತ ಪರಿಣಾಮ ಇತರ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ. ಕಳೆದ ೨ ದಿನಗಳಿಂದ ರಸ್ತೆ ಮಧ್ಯೆಯೇ ಈ ಲಾರಿ ನಿಂತಿದ್ದು, ದುರಸ್ತಿಗೊಳಿಸಿ ಸ್ಥಳಾಂತರ ಮಾಡದ ಹಿನ್ನೆಲೆ ಬೇರೆ ವಾಹನಗಳ ಸಂಚಾರಕ್ಕೆ ತೊಡಕಾಗಿದ್ದು, ತಕ್ಷಣ ತೆರವುಗೊಳಿಸುವಂತೆ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಒತ್ತಾಯಿಸಿದ್ದಾರೆ.