ಕಣಿವೆ, ಅ. ೧೮: ಸಾರಿಗೆ ಸಂಸ್ಥೆಯಲ್ಲಿ ಕಳೆದ ೩೧ ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಕಳೆದ ವಾರವಷ್ಟೇ ನಿವೃತ್ತಿಯಾದ ಹೆಬ್ಬಾಲೆಯ ಉಮೇಶ್ ಭಟ್ ಅವರನ್ನು ಗೆಳೆಯರ ಬಳಗದಿಂದ ಗೌರವಿಸಿ ಬೀಳ್ಕೊಡಲಾಯಿತು.

ನಿವೃತ್ತ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ, ಬ್ಯಾಂಕಿನ ನಿವೃತ್ತ ಅಧಿಕಾರಿಗಳಾದ ಹೆಚ್.ಎನ್. ಸುಬ್ರಮಣ್ಯ, ಹೆಚ್.ಎಸ್. ರಾಮಶೆಟ್ಟಿ, ಎಂ.ಎನ್. ಮೂರ್ತಿ, ಎಂ.ಎನ್. ಮಂಜುನಾಥ್, ಸಾಹಿತಿ ಭಾರದ್ವಾಜ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್, ಎನ್.ಕೆ. ಮೋಹನಕುಮಾರ್, ಮೆ.ನಾ. ವೆಂಕಟನಾಯಕ್, ಗೆಳೆಯರ ಬಳಗದ ಸಂಚಾಲಕ ಕೆ.ಎಸ್. ಮೂರ್ತಿ, ರಾಜೀವ್ ಮೊದಲಾದವರಿದ್ದರು.