ಪೊನ್ನಂಪೇಟೆ, ಅ. ೧೮: ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತೂರು ಗಿರಿಜನರ ಕಾಲೋನಿಯಲ್ಲಿ ಮಹಿಳೆಯೊಬ್ಬರು ಕಾಲೋನಿಯ ಜನರನ್ನು ಅನ್ಯ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದರು ಎಂಬುದಾಗಿ ಕೊಡಗು ಯುವ ಸೇನೆ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪ ವ್ಯಕ್ತಪಡಿಸಿದ್ದು ಪ್ರಕರಣ ಇದೀಗ ಠಾಣೆಯ ಮೆಟ್ಟಿಲೇರಿದೆ.
ಇಂದು ಬೆಳಗ್ಗೆ ಸುಮಾರು ೧೧.೩೦ರ ಸಮಯದಲ್ಲಿ ಮಾರುತಿ ವ್ಯಾನ್ನಲ್ಲ್ಲಿ ತನ್ನ ಮಗನೊಂದಿಗೆ ಆಗಮಿಸಿದ್ದ ದಿಡ್ಡಳ್ಳಿ ಪುನರ್ವಸತಿ ಹೋರಾಟಗಾರ್ತಿ, ಜೆ.ಕೆ.ಮುತ್ತಮ್ಮ ಮತ್ತೂರು ಕಾಲೋನಿಗೆ ತೆರಳಿದ್ದ ಸಂದರ್ಭ ಅವರು ಬಂದಿದ್ದ ಮಾರುತಿ ಓಮಿನಿ ವ್ಯಾನ್ಗೆ ಜೀಸಸ್ ಸ್ಟಿಕ್ಕರ್ ಅಂಟಿಸಿದ್ದನ್ನು ಗಮನಿಸಿದ ಸ್ಥಳೀಯರು ಆಕೆಯನ್ನು ವಿಚಾರಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಮುತ್ತಮ್ಮ ಅವರ ಮಗ ವಾಹನದಲ್ಲಿ ಪರಾರಿಯಾಗಿದ್ದಾನೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊನ್ನಂಪೇಟೆ ಪೊಲೀಸರು ಮುತ್ತಮ್ಮಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮತ್ತೂರು ಕಾಲೋನಿಯ ನಿವಾಸಿಗಳಾದ ಪಿ.ಬಿ.ಮುತ್ತ, ಪಿ.ಎಂ. ಮುತ್ತಿ ಹಾಗೂ ಮುತ್ತ ಎಂಬವರಿಗೆ ಜೆ.ಕೆ. ಮುತ್ತಮ್ಮ ಮತಾಂತರಕ್ಕೆ ಪ್ರಚೋದನೆ ನೀಡಿದ್ದು ಕ್ರೆöÊಸ್ತ ಧರ್ಮಕ್ಕೆ ಮತಾಂತರ ಆದರೆ ನಿಮಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಲಾಗುವುದು ಎಂದು ಆಮಿಷ ಒಡ್ಡಿದ್ದಾರೆ ಹಾಗೂ ಮತಾಂತರಕ್ಕೆ ಬಲವಂತಪಡಿಸಿರುವ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಯನ್ನು ಹಾಕಿದ್ದಾರೆ ಎಂಬುದಾಗಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮೂವರು ದೂರು ದಾಖಲಿಸಿದ್ದಾರೆ. ಮುತ್ತಮ್ಮ ಕೂಡ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ಸಲ್ಲಿಸಿದ್ದು ಮತ್ತೂರು ಕಾಲೋನಿಗೆ ರಾಷ್ಟಿçÃಯ ಪರಿಶಿಷ್ಟ ಪಂಗಡ ಹಾಗೂ ಬುಡಕಟ್ಟು ಆಯೋಗದ ಸದಸ್ಯರು ಮತ್ತು ಅಧಿಕಾರಿಗಳು ಭೇಟಿ ನೀಡುತ್ತಿದ್ದರಿಂದ, ಅವರನ್ನು ಭೇಟಿ ಮಾಡಲು ನಾನು ಬಂದಿದ್ದೆ. ಈ ಸಂದರ್ಭ ಸ್ಥಳೀಯರು ನನ್ನನ್ನು ತಡೆದು ತಳ್ಳಿ ಗಾಯಗೊಳಿ ಸಿದ್ದಾರೆ ಎಂಬುದಾಗಿ ದೂರು ಸಲ್ಲಿಸಿ ದ್ದಾರೆ. ಪೊಲೀಸರು ವಿಚಾರಣೆ ನಡೆಸಿದ ಬಳಿಕ ಮುತ್ತಮ್ಮ ಅವರನ್ನು ಬಿಡುಗಡೆ ಗೊಳಿಸಲಾಗಿದೆ.
(ಮೊದಲ ಪುಟದಿಂದ)
ಎರಡೂ ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಠಾಣಾಧಿಕಾರಿ ಡಿ. ಕುಮಾರ್ ತನಿಖೆ ಮುಂದುವರಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಗೆ ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್, ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಜಯರಾಮ್ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಸಂದÀರ್ಭ ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲಿರ ಚಲನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ಪೊನ್ನಂಪೇಟೆ ಶಕ್ತಿ ಕೇಂದ್ರದ ಪ್ರಮುಖರಾದ ಮೂಕಳಮಾಡ ಮಧು ಕುಮಾರ್, ಕೋಟೆರ ಕಿಶನ್ ಉತ್ತಪ್ಪ, ಕೊಡಗು ಯುವಸೇನೆ ಜಿಲ್ಲಾ ಉಪಾಧ್ಯಕ್ಷೆ ಕೊರಕುಟ್ಟಿರ ಲತಾ, ಪೊನ್ನಂಪೇಟೆ ತಾಲೂಕು ಸಂಚಾಲಕ ಚಾರಿಮಂಡ ದೇವಯ್ಯ, ಕಿರುಗೂರು ಗ್ರಾ.ಪಂ. ಅಧ್ಯಕ್ಷ ಪುತ್ತಾಮನೆ ಜೀವನ್, ಗ್ರಾ.ಪಂ. ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ, ಕಿರುಗೂರು ಶಕ್ತಿ ಕೇಂದ್ರದ ಚೆಪ್ಪುಡೀರ ವಿವೇಕ್, ಹಿಂದೂ ಜಾಗರಣ ವೇದಿಕೆಯ ಜೀವನ್, ಜೈಸ, ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಕೊಡಗು ಯುವ ಸೇನೆ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಇದ್ದರು.