ಮಡಿಕೇರಿ, ಅ. ೧೮: ಕೊಡಗಿನಲ್ಲಿ ಮತಾಂತರ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೊಡಗು ಯುವ ಸೇನೆ ಎಚ್ಚರಿಸಿದೆ.
ವಿವಿಧೆಡೆ ಮತಾಂತರ ಮಾಡುತ್ತಿದ್ದವರನ್ನು ತಡೆಹಿಡಿದ ಕಾರ್ಯಕರ್ತರ ವಿರುದ್ಧ ಪೊಲೀಸ್ ಪ್ರಕರಣವನ್ನು ದಾಖಲಿಸುತ್ತಿರುವುದು ಕಂಡುಬAದಿದೆ. ಇದು ಖಂಡನೀಯ. ಮತಾಂತರ ಮಾಡುವವರನು ಪೊಲೀಸ್ ಠಾಣೆಗೆ ಕರೆದೊಯ್ದು ಕೇವಲ ಹೇಳಿಕೆಯನ್ನು ಪಡೆದು ಕಳಿಸಲಾಗುತ್ತಿದೆ. ಯಾವುದೇ ರೀತಿಯ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸೇನೆ ಆಕ್ಷೇಪ ವ್ಯಕ್ತಪಡಿಸಿದೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೊಡಗು ಯುವ ಸೇನೆಯ ಜಿಲ್ಲಾ ಪ್ರಮುಖರಾದ ಕುಲದೀಪ್ ಪೂಣಚ್ಚ, ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ, ಜಿಲ್ಲಾ ಉಪಾಧ್ಯಕ್ಷರಾದ ಕೊರಕುಟ್ಟಿರ ಲತಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಪಳ್ಳಿ ಅಶ್ವತ್ಥ್ ಗೌಡ ಹೇಳಿಕೆಯ ಮೂಲಕ ಆಗ್ರಹಿಸಿದ್ದಾರೆ.