ಮಡಿಕೇರಿ, ಅ. ೧೮: ಕೊಡಗು ಜಿಲ್ಲೆಯಲ್ಲಿ ತಾ. ೧೮ ರಂದು ಯಾವುದೇ ಕೋವಿಡ್-೧೯ ಪ್ರಕರಣಗಳು ವರದಿಯಾಗಿಲ್ಲ. ನಿನ್ನೆ ತುಲಾ ಸಂಕ್ರಮಣ ಪ್ರಯುಕ್ತ ಲ್ಯಾಬ್‌ಗೆ ರಜೆಯಿದ್ದ ಕಾರಣ ಯಾವುದೇ ಮಾದರಿಗಳು ಆರ್.ಟಿ.ಪಿ.ಸಿ.ಆರ್. ಮೂಲಕ ಪರೀಕ್ಷೆÀ ನಡೆಸಲಾಗಿಲ್ಲ. ಅದ್ಯಾಗು ಕಾವೇರಿ ಸಂಕ್ರಮಣ ಪ್ರಯುಕ್ತ ನಿನ್ನೆ ತಲಕಾವೇರಿಯಲ್ಲಿ ಸುಮಾರು ೧೦೦ ಮಂದಿಗೆ ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಯಾವ ಮಾದರಿಯೂ ಕೋವಿಡ್ ಪಾಸಿಟಿವ್ ದೃಢವಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ೩೫,೧೬೯ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ೩೪,೫೨೨ ಮಂದಿ ಗುಣ ಮುಖರಾಗಿದ್ದಾರೆ. ಒಟ್ಟು ೨೧೯ ಸಕ್ರಿಯ ಪ್ರಕರಣಗಳಿದ್ದು, ೪೨೮ ಮಂದಿ ಮೃತಪಟ್ಟಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಒಬ್ಬರು ಬಿಡುಗಡೆ ಯಾಗಿದ್ದು, ೧ ಸಾವು ವರದಿಯಾಗಿದೆ. ಜಿಲ್ಲೆಯಲ್ಲಿ ೧೮ ನಿರ್ಬಂಧಿತ ವಲಯ ಗಳಿವೆೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.