ಕಣಿವೆ, ಅ. ೧೮: ಕೊಡಗು ಜಿಲ್ಲೆಯ ಎರಡನೇ ನೀರಾವರಿ ಯೋಜನೆಯಾದ ರಂಗಸಮುದ್ರದ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ಮುಂದಿನ ಎರಡು ವರ್ಷಗಳಲ್ಲಿ ಒಂದಷ್ಟು ಅಭಿವೃದ್ಧಿಗೊಂಡು ಝಗಮಗಿಸಲಿದೆ.
ವಿಶ್ವಬ್ಯಾಂಕ್ ಯೋಜನೆಯ ಹಣಕಾಸಿನ ನೆರವಿನೊಂದಿಗೆ ಕಾವೇರಿ ನೀರಾವರಿ ನಿಗಮ ಕೊಡಗಿನ ಚಿಕ್ಲಿಹೊಳೆ ಜಲಾಶಯದ ಆವರಣವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.
ಹಾರAಗಿ ಯೋಜನಾ ವೃತ್ತದ ಅಧೀನದಲ್ಲಿನ ಈ ಚಿಕ್ಲಿಹೊಳೆ ಜಲಾಶಯದ ಜೊತೆಗೆ ಹುಣಸೂರು ತಾಲೂಕಿನ ಕರಿ ಮುದ್ದೇನಹಳ್ಳಿ ಜಲಾಶಯವೂ ಕೂಡ ಅಭಿವೃದ್ಧಿಯಾಗಲಿದೆ ಎಂದು ಹಾರಂಗಿ ಜಲಾಶಯ ಯೋಜನೆಯ ಕಾರ್ಯಪಾಲಕ ಅಭಿಯಂತರ ಎಂ.ಡಿ. ನಾಗೇಶ್ ತಿಳಿಸಿದ್ದಾರೆ.
ಈಗಾಗಲೇ ಜಲಾಶಯದ ಸುತ್ತಲಿನ ಆವರಣದಲ್ಲಿ ಬೆಳೆದು ನಿಂತಿರುವ ಕಾಡು ಗಿಡಗಳನ್ನು ತೆರವುಗೊಳಿಸಿ ಸೂಕ್ತ ತಡೆಗೋಡೆ ನಿರ್ಮಿಸುವುದು. ಜಲಾಶಯದ ಸೆರಗಿನಲ್ಲಿ ವಸತಿ ಗೃಹ ನಿರ್ಮಾಣ, ಅತ್ಯಾಕರ್ಷಕ ಲೈಟಿಂಗ್ ಅಳವಡಿಕೆ, ಆಕರ್ಷಕ ಉದ್ಯಾನವನ, ಬೋಟಿಂಗ್, ಹಾಳಾಗಿರುವ ಕಂಬಿಬಾಣೆ ಚಿಕ್ಲಿಹೊಳೆ ಸಂಪರ್ಕ ರಸ್ತೆಯನ್ನು ಸರ್ವ ಋತುವಿನ ಕಾಂಕ್ರೀಟ್ ರಸ್ತೆ ಯಾಗಿ ಮಾರ್ಪಡಿಸುವುದು, ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುವ ಮೂಲ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ನುರಿತ ಇಂಜಿನಿಯರು ಗಳು ಇರುವ ತಂಡವನ್ನು ರಚಿಸಲಾ ಗುವುದು. ಆ ತಂಡ ಚಿಕ್ಲಿಹೊಳೆ ಜಲಾಶಯಕ್ಕೆ ಆಗಮಿಸಿ ಅಲ್ಲಿನ ಸ್ಥಳ ಪರಿಶೀಲನೆ ನಡೆಸಲಿದೆ. ಹಾಗೆಯೇ ಜಲಾಶಯಕ್ಕೆ ಅಗತ್ಯವಾಗಿ ಬೇಕಾದ ಮೂಲ ಸೌಕರ್ಯಗಳ ವಿಸ್ತçತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ನಂತರ ಅನುಮೋದನೆಗೊಂಡು ಅಗತ್ಯವುಳ್ಳ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕೇವಲ ಎರಡು ವರ್ಷಗಳಲ್ಲಿ ಈ ಯೋಜನೆ ಪೂರ್ಣ ಗೊಳ್ಳಬೇಕಿರುವ ಕಾರಣ ತಡ ಮಾಡದೇ ಈ ಯೋಜನೆಯನ್ನು ಶೀಘ್ರದಲ್ಲಿಯೇ ಜಾರಿಗೊಳಿಸಲಾ ಗುತ್ತಿದೆ ಎಂದು ನಾಗೇಶ್ ವಿವರಿಸಿದರು.
ಈಗಾಗಲೇ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಡ್ರಿಪ್ - ಒನ್ ಯೋಜನೆಯಡಿ ಹಾರಂಗಿ ಜಲಾಶಯದ ಒಳಾವರಣದಲ್ಲಿ ಅಗತ್ಯವುಳ್ಳ ಅಭಿವೃದ್ಧಿ ಕಾರ್ಯ ಗಳನ್ನು ನೆರವೇರಿಸಲಾಗಿದೆ. ಇದೀಗ ಎರಡನೇ ಬಾರಿಗೆ ಡ್ರಿಪ್ - ಟು ಯೋಜನೆಯಡಿ ಚಿಕ್ಲಿಹೊಳೆ ಜಲಾಶಯ ಸೇರ್ಪಡೆಯಾಗಲಿದೆ ಎಂದು ಜಲಾಶಯದ ಕಾರ್ಯಪಾಲಕ ಅಭಿಯಂತರ ನಾಗೇಶ್ ವಿವರಿಸಿದರು..
ಈ ಹಿಂದೆ ‘ಶಕ್ತಿ’ಯಲ್ಲಿ ಪ್ರಕಟ ಗೊಂಡ ಕಾಡುಪಾ ಲಾಗುತ್ತಿರುವ ಚಿಕ್ಲಿಹೊಳೆ ಜಲಾಶಯ ಎಂಬ ವರದಿಗೆ ಸ್ಪಂದಿಸಿರುವ ಕಾರ್ಯ ಪಾಲಕ ಅಭಿಯಂತರ ನಾಗೇಶ್ ರಂಗಸಮುದ್ರದಿAದ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ೮ ಕಿಮೀ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿದ್ದ ಕಾಡು ಗಿಡಗಳನ್ನು ತೆರವು ಗೊಳಿಸಿ ಸುಗಮ ವಾಹನಗಳ ಸಂಚಾರಕ್ಕೆ ಅನುವು ಮಾಡಲಾಗಿದೆ. ಹಾಗೆಯೇ ಕಂಬಿಬಾಣೆ ಚಿಕ್ಲಿಹೊಳೆ ರಸ್ತೆ ಬದಿಯ ಕಾಡು ತೆರವು ಗೊಳಿಸಲಾಗಿದೆ. ಜಲಾಶಯದ ನಿರ್ವಹಣೆಗೆ ಅನುಕೂಲವಾಗು ವಂತೆ ಇಬ್ಬರು ಸೆಕ್ಯೂರಿಟಿಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
-ಕೆ.ಎಸ್. ಮೂರ್ತಿ