ಕೂಡಿಗೆ, ಅ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ಮತ್ತು ಎರಡನೇ ವಾರ್ಡ್ ಸಭೆಯು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ವಾರ್ಡ್ ನಿವಾಸಿಗಳು ಕುಡಿಯುವ ನೀರು ಮತ್ತು ಚರಂಡಿ ದುರಸ್ತಿಗೆ ಸಂಬAಧಿಸಿದ ಅನೇಕ ಅಹವಾಲುಗಳನ್ನು ನೀಡಿದರು. ಅಲ್ಲದೆ ಮುಂದಿನ ಮಾಸಿಕಸಭೆಯಲ್ಲಿ ಆಯಾ ವಾರ್ಡ್ಗೆ ಅನುಕೂಲವಾಗುವ ದೃಷ್ಟಿಯಿಂದ ಆಗಬೇಕಾಗುವ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಯಾರಿಸಿ ಅದರ ಅನುಗುಣವಾಗಿ ಕಾಮಗಾರಿಗಳನ್ನು ನಡೆಸುವಂತೆ ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ, ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಸದಸ್ಯ ಅರುಣ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ ಸೇರಿದಂತೆ ವಾರ್ಡ್ನ ಗ್ರಾಮಸ್ಥರು ಹಾಜರಿದ್ದರು.