ನಾಪೋಕ್ಲು, ಅ. ೧೮: ಎಮ್ಮೆಮಾಡು ಎಸ್.ಕೆ.ಎಸ್.ಎಸ್.ಎಫ್.ನ ನೂತನ ಸಾಲಿನ ಅಧ್ಯಕ್ಷರಾಗಿ ಪಿ.ಎಸ್. ಉಮ್ಮರ್ ಹಾಜಿ ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಕೂರೂಳಿ, ಸಹ ಕಾರ್ಯದರ್ಶಿಯಾಗಿ ಕನ್ನಡಿಯಂಡ ಶಮೀರ್ ಮತ್ತು ಖಜಾಂಚಿಯಾಗಿ ಬಶೀರ್ ಕೊಟ್ಟಮುಡಿಯವರನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರಾಗಿ ಮುಹಮ್ಮದ್ ಅಜ್ಸರಿ, ನಿಶಾರ್ ಕೂರೂಳಿ, ಶಭೀರ್ ನೆರೋಟ್ ಮೈದುಕುಟ್ಟಿ ಪೊಟ್ಟಂಡ ಸೇರಿದಂತೆ ೧೧ ಜನರನ್ನು ಆಯ್ಕೆ ಮಾಡಲಾಯಿತು.
ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಇಬಾದ್ ಚೇರ್ಮನ್ ರಿಯಾಜ್ ಪೈಝಿ ವಹಿಸಿದ್ದರು, ತಾಲೂಕು ಎಸ್.ವೈ.ಎಸ್.ನ ಅಧ್ಯಕ್ಷ ಇಬ್ರಾಹಿಂ ಹಾಜಿ ಮಾತನಾಡಿದರು. ವೇದಿಕೆಯಲ್ಲಿ ಚಕ್ಕೇರ ಮಾಯಿನ್ ಹಾಜಿ, ಅಹ್ಮದ್ ಮುಸ್ಲಿಯಾರ್, ಮೊÊದು ಕುಂಞ, ಕಾಳೇರ ಉಮ್ಮರ್ ಇದ್ದರು.