ಚೆಟ್ಟಳ್ಳಿ, ಅ. ೧೮: ಇತ್ತೀಚೆಗೆ ಅಗಲಿದ ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ, ಕೊಡಗು ಜಿಲ್ಲಾ ನಾಯಿಬ್ ಖಾಝಿಯಾದ ಶೈಖುನಾ ಮಹ್ಮೂದ್ ಉಸ್ತಾದ್ ಅನುಸ್ಮರಣೆ ಹಾಗೂ ಶೈಖುನಾ ಮಾಣಿಕ್ಕೋತ್ ಮಜೀದ್ ಉಸ್ತಾದ್ ಆಂಡ್ ನೇರ್ಚೆ ವೀರಾಜಪೇಟೆಯ ಅನ್ವಾರುಲ್ ಹುದಾದಲ್ಲಿ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಅಧ್ಯಕ್ಷ ಸಯ್ಯಿದ್ ಕಿಲ್ಲೂರು ತಂಙಳ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಕೂರ್ಗ್ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಅಹ್ಸನೀ ಉಸ್ತಾದ್ ಉದ್ಘಾಟಿಸಿದರು. ಮಹ್ಮೂದ್ ಉಸ್ತಾದರ ಬಾಲ್ಯ ಗೆಳೆಯರಾದ ಉಮರ್ ಮಾಸ್ಟರ್ ಎಡಪ್ಪಲಂ ಅವರನ್ನು ಅನ್ವಾರುಲ್ ಹುದಾ ವತಿಯಿಂದ ಶಾಲು ಹೊದಿಸಿ, ನೆನೆಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಉಮರ್ ಮಾಸ್ಟರ್ ಹಾಗೂ ಮಜೀದ್ ಉಸ್ತಾದರ ಶಿಷ್ಯರಾದ ಅಲಿ ಸಅದಿ ಅನುಸ್ಮಾರಣಾ ಭಾಷಣ ಮಾಡಿದರು.
ಮಹ್ಮೂದ್ ಉಸ್ತಾದ್ ಹಾಗೂ ಮಜೀದ್ ಉಸ್ತಾದರ ಜೀವನಶೈಲಿ, ಇಲ್ಮ್, ಆರಾಧನೆ, ವಿನಯ ಹಾಗೂ ಸಾಂಘಿಕ ಸೇವೆಯ ಕುರಿತು ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಸಯ್ಯದ್ ಹಾಶಿಂ ಸಖಾಫಿ ಆದೂರ್ ಕಾರ್ಯಕ್ರಮ ದಲ್ಲಿ ಶುಭಕೋರಿದರು.
ಕೂರ್ಗ್ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಶಾದುಲಿ ಫೈಝಿ ಉಸ್ತಾದರ ನೇತೃತ್ವದಲ್ಲಿ ಸಮಾರೋಪ ದುಆ ನಡೆಯಿತು. ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರು ಭಾಗವಹಿಸಿದ್ದರು.