ಕೂಡಿಗೆ, ಅ. ೧೬: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಹಕ್ಕುಗಳ ಕುರಿತು ಕಾನೂನು ಮತ್ತು ನೆರವು ಅಭಿಯಾನ ಕಾರ್ಯಕ್ರಮ ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಎನ್. ಸುಬ್ರಮಣ್ಯ ನೆರವೇರಿಸಿ, ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಿ ಹಿರಿಯರು ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಸುಖಕರವಾದ ಜೀವನ ನಡೆಸುವಂತೆ ಆಗಬೇಕೆಂದು ತಿಳಿಸಿದರು. ಕಾನೂನಿನಲ್ಲಿರುವ ಪಾಲನೆ-ಪೋಷಣೆ ಹಾಗೂ ರಕ್ಷಣೆ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.

ವಿಶೇಷಚೇತನ ಸಬಲೀಕರಣ ಅಧಿಕಾರಿ ವಿಮಲ ಅವರು ಹಿರಿಯ ನಾಗರಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಶಕ್ತಿ ವ್ರದ್ಧಾಶ್ರಮದ ಕಾರ್ಯದರ್ಶಿ ಚಂದ್ರು ಇಲಾಖಾ ಸಿಬ್ಬಂದಿ ನವೀನ್ ಹಾಜರಿದ್ದರು.