*ಗೋಣಿಕೊಪ್ಪ, ಅ. ೧೬: ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಆಶ್ರಯದಲ್ಲಿ ೨೦೧೭ ರಿಂದ ಆರಂಭವಾದ ಚಂಗ್ರಾAದಿ ಪತ್ತಲೋದಿ ವಿಶೇಷ ಕಾರ್ಯಕ್ರಮ ಜನೋತ್ಸವದ ಮಾದರಿಯಲ್ಲಿ ವರ್ಷಂಪ್ರತಿ ಜರುಗುತ್ತಿದ್ದು ಈ ಬಾರಿಯೂ ೧೦ ದಿನಗಳ ಕಾಲ ವಿವಿಧ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ.

ಪ್ರಸಕ್ತ ೫ನೇ ವರ್ಷದ ಈ ಚಂಗ್ರಾAದಿ ಪತ್ತಲೋದಿ ಕಾರ್ಯಕ್ರಮವು ತಾ. ೧೮ ರಂದು ಪೂರ್ವಾಹ್ನ ೧೦ ಗಂಟೆಗೆ ತೀರ್ಥ ಪೂಜೆ ಮಾಡಿ ಎಲ್ಲಾ ಭಕ್ತರಿಗೆ ತೀರ್ಥ ವಿತರಿಸುವುದರೊಂದಿಗೆ ಆರಂಭವಾಗಿ ಅಂದು ಸಂಜೆ ೫ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜ ತಂಡದ ಕಲಾವಿದರಿಂದ ಜಾನಪದ ತಜ್ಞ ಕಾಳಿಮಾಡ ಮೋಟಯ್ಯ ನಿರ್ದೇಶನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ತಾ. ೧೯ ರಂದು ಸಂಜೆ ೫ ಗಂಟೆಗೆ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಕಲಾವಿದರಿಂದ ಸಂಗೀತಗೋಷ್ಠಿ, ತಾ. ೨೦ ರಂದು ಸಂಜೆ ೫ ಗಂಟೆಗೆ ಕೋಯಲ್ ಹಾಗೂ ಸಂಗಡಿಗರ ಸಾಂಸ್ಕೃತಿಕ ಪ್ರದರ್ಶನ.

ತಾ. ೨೧ ರಂದು ಸಂಜೆ ೬ ಗಂಟೆಗೆ ಸ್ಥಳೀಯ ಸೀಮಿತ ಅಭಿಮಾನಿಗಳಿಗೆ "ಉಸಾರ್" ಕೊಡವ ಸಿನೇಮಾದ ಉಚಿತ ಪ್ರದರ್ಶನ ಏರ್ಪಡಿಸಲಾಗಿದೆ.

ತಾ. ೨೨ ರಂದು ಸಂಜೆ ೬ ಗಂಟೆಗೆ ೫ ಕೊಡವ ಭಾಷೆಯ ಕಿರುಚಿತ್ರಗಳ ಪ್ರದರ್ಶನ, ತಾ. ೨೩ ರ ಸಂಜೆ ೫ ಗಂಟೆಗೆ ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟದವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ತಾ. ೨೪ ರ ಸಂಜೆ ೪.೩೦ ಗಂಟೆಯಿAದ ಟಿ. ಶೆಟ್ಟಿಗೇರಿ ‘ಸಂಭ್ರಮ ಪೊಮ್ಮಕ್ಕಡ ಕೂಟ' ಹಾಗೂ ಗೋಣಿಕೊಪ್ಪ ‘ಜನನಿ ಪೊಮ್ಮಕ್ಕಡ ಕೂಟ'ದ ವತಿಯಿಂದ ಅಡುಗೆ ಪೈಪೋಟಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ.

ತಾ. ೨೫ ರ ಸಂಜೆ ೫ ಗಂಟೆಗೆ ಪೊನ್ನಂಪೇಟೆ ಸಾಯಿ ಶಂಕರ್ ವಿದ್ಯಾಸಂಸ್ಥೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ತಾ. ೨೬ ರ ಸಂಜೆ ೫ ಗಂಟೆಗೆ ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆ ಮಕ್ಕಳಿಂದ ವಿಶೇಷ ರೂಪಕ ಪ್ರದರ್ಶನಗೊಳ್ಳಲಿದೆ.

ತಾ. ೨೭ ರಂದು ಪೂರ್ವಾಹ್ನ ೯.೩೦ ಗಂಟೆಯಿAದ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ ವ್ಯಾಪ್ತಿಗೊಳಪಡುವ ಟಿ. ಶೆಟ್ಟಿಗೇರಿ, ವಗರೆ, ತಾವಳಗೇರಿ, ಈಸ್ಟ್ ನೆಮ್ಮಲೆ, ವೆಸ್ಟ್ನೆಮ್ಮಲೆ, ಹರಿಹರ ಗ್ರಾಮ ತಂಡಗಳ ನಡುವೆ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಮಹಿಳೆಯರಿಗೆ ಮುಕ್ತ ವಿಷ ಚೆಂಡು ಪೈಪೋಟಿ, ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಪ್ರಕಟಣೆ ತಿಳಿಸಿದೆ.