ಮಡಿಕೇರಿ, ಅ. ೧೬: ಜನಮನ ಸೆಳೆಯುತ್ತಿದ್ದ ಮಡಿಕೇರಿ ದಸರಾ ಕೋವಿಡ್ ನಿರ್ಬಂಧದ ನಡುವೆಯೂ ಈ ಬಾರಿ ವೈಭವಯು ತವಾಗಿ ನಡೆಯಿತು. ದಶಮಂಟಪಗಳ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಜನರು ನಗರಕ್ಕೆ ಆಗಮಿಸಿದ್ದರು. ರಾತ್ರಿ ೧೧ ಗಂಟೆಯ ಬಳಿಕ ಜನದಟ್ಟಣೆ ಹೆಚ್ಚಾಯಿತು. ಪ್ರವಾಸಿಗರು ಮಂಜಿನನಗರಿಯ ದಸರಾ ವೀಕ್ಷಿಸಲು ಆಗಮಿಸಿದ್ದು ಕಂಡುಬAತು. ಕೋವಿಡ್ ಹಿನ್ನೆಲೆ ಕಳೆದ ವರ್ಷ ಮಂಕಾಗಿದ್ದ ದಸರಾ ಉತ್ಸವ ಈ ಬಾರಿ ವರ್ಣ ರಂಜಿತವಾಗಿತ್ತು.
ರಾತ್ರಿ ೧೦.೩೦ರ ತನಕ ಕಡಿಮೆ ಇದ್ದ ಜನಸಂಖ್ಯೆ ಬಳಿಕ ಏರತೊಡ ಗಿತು. ನೋಡನೋಡುತ್ತ ರಸ್ತೆಗಳಲ್ಲಿ ಜನಸಾಗರ ಕಂಡುಬAತು. ಜನದಟ್ಟಣೆ ಇದ್ದರೂ ನೂಕುನುಗ್ಗಲು ಸೃಷ್ಟಿಯಾಗಿಲ್ಲ. ದಶಮಂಟಪಗಳನ್ನು ವೀಕ್ಷಿಸಿದ ಜನರು ಪುಳಕಿತರಾದರು. ಪೊಲೀಸರು ಸಮರ್ಪಕವಾಗಿ ಭದ್ರತೆ ವಹಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ್ದರು. ರಾತ್ರಿ ೭ ರ ನಂತರ ವಾಹನ ಸಂಚಾರವನ್ನು ತಡೆಹಿಡಿಯಲಾಯಿತು. ದಶಮಂಟಪಗಳ ಎದುರು ಜನರು ಡಿ.ಜೆ ಹಾಗೂ ವಾಲಗಕ್ಕೆ ಕುಣಿದು ಕುಪ್ಪಳಿಸಿದರು.
ಮಾಸ್ಕ್ ಕಿರಿಕಿರಿ: ಸಹಸ್ರ ಸಂಖ್ಯೆಯಲ್ಲಿ ದಶಮಂಟಪ ಶೋಭಾಯಾತ್ರೆಗೆಂದು ಬಂದ ಜನರಿಗೆ ಮಾಸ್ಕ್ ಕಿರಿಕಿರಿ ಎದುರಾ ಯಿತು. ನಡೆದಾಡುತ್ತಿದ್ದ ಜನರು ಮಾಸ್ಕ್ ಧರಿಸದಿದ್ದಲ್ಲಿ ಪೊಲೀಸರು ಲಾಠಿ ರುಚಿ ತೋರಿದ ಘಟನೆಯೂ ನಡೆಯಿತು. ಕೋಟೆ ಎದುರು ಪೊಲೀಸರು ಮಾಸ್ಕ್ ಧರಿಸದವರನ್ನು ಹಿಡಿದು ಎಚ್ಚರಿಕೆ ನೀಡುತ್ತಿದ್ದರು. ಇದು ಆಕ್ಷೇಪಕ್ಕೆ ಕಾರಣವಾಯಿತು.