ಮನೋವೇಗದ ವಾಹನಗಳು: ಮನುಷ್ಯರಿಂದ ಏಳಿಗೆಗಾಗಿ ಭೂಮಿಗೆ ಸಮನಾದ ಮನೋವೇಗದಂತಹ ವಾಹನಗಳನ್ನು ತಯಾರಿಸಲಾಗುತ್ತ ದೆಯೋ, ಅವುಗಳು ಇಲ್ಲಿ ಸ್ಥಿರ ಸುಖಕ್ಕೆ ಕಾರಣವಾಗುತ್ತವೆ.

ಭೂಗರ್ಭ ಶಾಸ್ತçವನ್ನು ತಿಳಿಯಬೇಕು : ಈ ಸೃಷ್ಟಿಯಲ್ಲಿ ಭೂಗರ್ಭಶಾಸ್ತçವನ್ನು ತಿಳಿದು ಜಯಸಾಧಿಸುವ ಅಧ್ಯಾಪಕನು, ಶ್ರೀಮಂತನೂ ಎಲ್ಲರ ರಕ್ಷಕನೂ ಪದಾರ್ಥ ವಿದ್ಯೆಯನ್ನು ತರ್ಕದಿಂದ ಊಹಿಸಿ ತಿಳಿಯು ವನು, ಅವನೇ ಪ್ರಸಿದ್ಧ ಭೂಗರ್ಭ ವಿಜ್ಞಾನಿಯಾಗುವನು.

ಅಧ್ಯಾಪಕೋಪದೇಶಕರ ವರ್ಣನೆ: ಯಾರು ವಿದ್ಯಾವಂತ ಅಧ್ಯಾಪಕೋಪದೇಶಕರಿಂದ ವಿದ್ಯಾರ್ಜನೆ ಮಾಡಿ ಬೇರೆಯವರಿಗೂ ಹೇಳಿ ಕೊಡುವರೋ, ಅವರು ಅಗ್ನಿಗೆ ಸಮಾನ ತೇಜಸ್ವಿಗಳೂ, ಪರಿಶುದ್ಧರೂ ಆಗಿ ಎಲ್ಲಾ ಕಡೆಗಳಿಂದಲೂ ಪ್ರಸಿದ್ಧರಾಗಿ ವರ್ತಮಾನರಾಗುತ್ತಾರೆ.

ಮಾನವೀಯರು ಯಾರು : ಧರ್ಮಾತ್ಮರೂ ಶ್ರೇಷ್ಠ ವಿದ್ವಾಂಸರೂ ಆದ ಅಧ್ಯಾಪಕರ ಮಾತನ್ನು ಕೇಳುವವರು ಕುಮಾರ್ಗಗಳನ್ನು ತ್ಯಜಿಸಿ ಸುಮಾರ್ಗಿಗಳಾಗುತ್ತಾರೆ. ಯಾರು ಮನಸಾ-ವಾಚಾ-ಕರ್ಮಣಾ ಸುಳ್ಳನ್ನಾ ಡಲು ಬಯಸುವುದಿಲ್ಲವೋ, ಅವರು ಮಾನನೀಯರಾಗುತ್ತಾರೆ.

ಸತ್ಯವಾದಿಯ ಹಿರಿಮೆ :ಮನುಷ್ಯರು ಸತ್ಯವನ್ನೇ ನುಡಿಯುವಾಗ ಅವರ ಮುಖವು ಕಳಪೆಯಾಗಿರುವುದಿಲ್ಲ, ಸುಳ್ಳು ಹೇಳುವಾಗ ಮುಖವು ಕಳಪೆಯಾಗಿರುತ್ತದೆ. ಭೂಮಿಯಲ್ಲಿ ಓಷಧಿಗಳನ್ನು ಹೇಗೆ ಮೇಘವು ಬೆಳೆಸುತ್ತದೆಯೋ, ಹಾಗೇ ಸಭಾಪತಿಯು ತನ್ನ ಉಪದೇಶದಿಂದ ಸಭಾಸದರ ಯೋಗ್ಯತೆಯನ್ನು ಬೆಳೆಸಬೇಕು.

ಬಹುವಿಧ ಶಕ್ತಿಯ ವಾಹನಗಳ ವರ್ಣನೆ : ವಿದ್ಯುತ್‌ಶಕ್ತಿ, ಅಗ್ನಿ ಶಕ್ತಿ, ಜಲಶಕ್ತಿ, ವಾಯುಶಕ್ತಿ ಇವುಗಳಿಂದ ಚಲಿಸುವಂತಹ ವಾಹನಗಳಿಂದ ದೇಶ-ದೇಶಾಂತರಗಳಿಗೆ ಸಂಚಾರ ಮಾಡುವವರು ಪರಿಪೂರ್ಣ ಧನವಂತರಾಗುತ್ತಾರೆ.

ಎಲ್ಲರ ರಕ್ಷಕರಾಗುತ್ತಾರೆ : ಯಾರಿಗೆ ದುಷ್ಟರನ್ನು ಬಂಧಿಸುವ, ಶತ್ರ‍್ರು ಗಳನ್ನು ನಾಶಗೊಳಿಸುವ ಹಾಗೂ ವಿದ್ವಾಂಸರ ಉಪದೇಶ ಕೇಳಿ, ಅದರಂತೆ ಆಚರಿಸುವ ಸಾಮರ್ಥ್ಯವಿದೆಯೋ, ಅವರೇ ಎಲ್ಲರ ರಕ್ಷಕರಾಗುತ್ತಾರೆ.

ಸಮುದ್ರಯಾನದಿಂದ ಸುಖ : ಯಾರು ಬಹುದೊಡ್ಡದಾದ ಹಡಗನ್ನು ತಯಾರಿಸಿ, ಸಮುದ್ರದಲ್ಲಿ ಸಂಚರಿಸುವರೋ, ಅವರು ತಾವೂ ಸುಖಿಗಳಾಗಿ ಬೇರೆಯವರನ್ನು ಸುಖಿಗಳನ್ನಾಗಿಸುತ್ತಾರೆ.

ಹಡಗಿನ ತಯಾರಿಕೆಯ ಬಗೆ : ಮನುಷ್ಯರು ಸಮುದ್ರಯಾನ ಮಾಡಲು ಇಚ್ಛಿಸುವವರಾದರೆ ಉತ್ಕೃಷ್ಟವಾದ ಅಲೆಗಳನ್ನು ತಡೆಯುವ ಸಾಮರ್ಥ್ಯ ಪಡೆದ ಹಡಗನ್ನೂ, ಆಪತ್ಕಾಲದಲ್ಲಿ ಉಪಯೋಗಿಸಲು ಸಣ್ಣ-ಸಣ್ಣ ನೌಕೆ ಗಳನ್ನು ತಯಾರಿಸಿಕೊಂಡು ತಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳಬೇಕು.

ಮನುಷ್ಯನು ಪರೋಪಕಾರಿಯಾಗಬೇಕು : ಮನುಷ್ಯನು ಹೇಗೆ ತನ್ನ ಪ್ರಯೋಜನವನ್ನು ಬಯಸುವನೋ, ಹಾಗೆ ಪರೋಪಕಾರವನ್ನೂ ಬಯಸ ಬೇಕು. ವಿದ್ಯಾವಂತರು ಉಪದೇಶವನ್ನು ಪ್ರೀತಿಯಿಂದ ಸ್ವೀಕರಿಸಲೂಬೇಕು.

ವಿಮಾನಯಾನ : ಶೀಘ್ರಗತಿಯ ಪಕ್ಷಿಗಳಂತೆ ಆಕಾಶದಲ್ಲಿ ಸಂಚರಿಸುವ ವಿಮಾನಯಾನವನ್ನು ತಯಾರಿಸಿಕೊಳ್ಳದಿದ್ದರೆ ತಲುಪಬೇಕಾದ ಸ್ಥಳವನ್ನು ಬೇಗನೇ ತಲಪಲು ಮತ್ತು ಕಾರ್ಯ ಸಾಧಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ವಾಹನದ ಸುವ್ಯವಸ್ಥೆ : ಮನುಷ್ಯರು ಯಾವ ವಾಹನದಿಂದ ಗಮನಿಸಲು ನಿಶ್ಚಯಿಸಿರುವರೋ, ಆ ವಾಹನವನ್ನು ಭೂಮ್ಯಾದಿಗಳಲ್ಲಿ ಬೇಗ ಹೋಗುವಂತೆ ಬೆಳಗಿನ ಪ್ರಕಾಶದಂತೆ ಉತ್ತಮ ರೀತಿಯಲ್ಲಿ ತಯಾರಿಸಿಕೊಳ್ಳಬೇಕು.

ವಿವಿಧ ವಾಹನಗಳು : ಮನುಜರೇ ತನಗೂ ತನ್ನ ಸಂತಾನಕ್ಕೂ ಶೀಘ್ರಗಮನ ಮಾಡಲು ಯೋಗ್ಯವಾದ ಭೂಮಿ-ಆಕಾಶ-ಜಲ ಮಾರ್ಗಗಳಲ್ಲಿ ಸಂಚರಿಸುವAತಹ ಸಕಲ ಸುಖ-ಸಾಮಗ್ರಿಗಳನ್ನೊಳಗೊಂಡ ಉತ್ತಮ ರಥವನ್ನು ಸಾವಧಾನದಿಂದ ತಯಾರಿಸಿಕೊಳ್ಳಬೇಕು.

ವಿಘ್ನಗಳನ್ನು ತೊಲಗಿಸಿಕೊಳ್ಳಬೇಕು : ಮನುಷ್ಯರು ಮನೆಯಲ್ಲಿರಲಿ, ವನದಲ್ಲಿರಲಿ, ವಾಹನದಲ್ಲಿರಲಿ ಅಲ್ಲೆಲ್ಲ ತಮಗೆ ಭೋಗಯೋಗ್ಯ ವಸ್ತುಗಳನ್ನು ಸಂಗ್ರಹಿಸಿಕೊಳ್ಳಬೇಕು. ತಮ್ಮ ರಕ್ಷಣೆಗೆ ಬೇಕಾದ ರಕ್ಷಣಾ ಸಾಮಗ್ರಿಗಳನ್ನೂ ಸಂಪಾದಿಸಿಕೊಳ್ಳಬೇಕು. ಅದರಿಂದ ತಮ್ಮ ನಿವಾಸಕ್ಕಾಗಲಿ, ಕೆಲಸಕಾರ್ಯ ಗಳಿಗಾಗಲಿ ಯಾವುದೇ ರೀತಿಯ ವಿಘ್ನಗಳು ಬರಲಾರವು.

ಪ್ರವೀಣರಾದವರನ್ನು ಸಮೀಪಿಸಬೇಕು : ನೌಕಾದಿ ವಾಹನಗಳಿರು ವವರು ಹೇಗೆ ನಿರ್ದೇಶಿಸಿದ ದಿಕ್ಕುಗಳತ್ತ ಸುಖವಾಗಿ ಪ್ರಯಾಣಿಸುವರೋ, ಹಾಗೆ ಆ ತಂತ್ರಜ್ಞಾನವನ್ನು ಬಯಸುವ ವಿದ್ಯಾರ್ಥಿಗಳು ಅದರಲ್ಲಿ ಪ್ರವೀಣರಾದ ಅಧ್ಯಾಪಕರನ್ನು ಸಮೀಪಿಸಬೇಕು.

ಶಿಲ್ಪವಿದ್ಯಾ ಪರಿಣಿತರು : ಶಿಲ್ಪವಿದ್ಯಾಪರಿಣಿತರು ಉತ್ತಮ ವಾಹನವನ್ನು ತಯಾರಿಸಿಕೊಂಡು ಭೂ-ಜಲ-ಅಂತರಿಕ್ಷ ಮಾರ್ಗಗಳಲ್ಲಿ ಸಂಚರಿಸಲು ಸಮರ್ಥರಾಗುತ್ತಾರೆ. ವಿದ್ಯಾಪ್ರಭಾವದಿಂದ ಅವರು ಎಲ್ಲವನ್ನೂ ಪಡೆದುಕೊಳ್ಳಲು ಅರ್ಹರಾಗುತ್ತಾರೆ.

ಅಧ್ಯೋಪಕೋಪದೇಶಕರ ನಡವಳಿಕೆ : ಅಧ್ಯಾಪಕರು ಮತ್ತು ಉಪದೇಶಕರು ಹೇಗೆ ವಿದ್ಯಾರ್ಥಿಗಳಿಗೂ ಮತ್ತು ಉಪದೇಶ ಕೇಳುವವರಿಗೂ ವೇದಾದಿ ವಚನಗಳನ್ನು ಅರ್ಥಸಹಿತ ಬೋಧಿಸಿ ಜ್ಞಾನವಂತರಾಗಿ, ವಿದ್ಯಾವಂತ ರಾಗಿ ಮಾಡುತ್ತಾರೆಯೋ, ಅದೇ ರೀತಿ ಅವರ ಮಾತುಗಳನ್ನು ಕೇಳಿಸಿಕೊಂಡು ಸದಾಕಾಲವೂ ಅದರಂತೆ ನಡೆದುಕೊಳ್ಳುವವರು ತಾನೂ ಆನಂದವನ್ನು ಅನುಭವಿಸುತ್ತಾ, ಬೇರೆಯವರನ್ನೂ ಆನಂದಿತರನ್ನಾಗಿಸಲು ಯೋಗ್ಯರಾಗುತ್ತಾರೆ.

ಹಣದ ಸದುಪಯೋಗ: ಸುಸಜ್ಜಿತಗೊಳಿಸಿದ ಸೆೆÃನೆಯು ಹೇಗೆ ಶತ್ರುಗಳನ್ನು ಜಯಿಸುತ್ತದೆಯೋ, ಹಾಗೆಯೇ ಸಂಪಾದಿಸಿದ ಹಣದ ಸದುಪಯೋಗವನ್ನು ಮೊದಲೇ ಸುಸಜ್ಜಿತಗೊಳಿಸಿ ಬಹುಬೇಗನೆ ಅವುಗಳಿಂದ ಸಾಧಿಸಬೇಕಾದ ವಿಜಯಗಳನ್ನು ಸಾಧಿಸಿಕೊಳ್ಳಬೇಕು. ಅಬಾಧಿತವಾದ ಕಾಲಗಳ ವಿಶೇಷ ಭಾಗಗಳಲ್ಲಿ ಹಗಲಿನ ಭಾಗವು ಯಾವುದೋ, ಅದರಲ್ಲಿ ಉತ್ತಮ ಕಾರ್ಯಗಳು ನಡೆಯುತ್ತವೆ. ಆದರೆ, ರಾತ್ರಿಯ ಭಾಗದಲ್ಲಿ ಅಂತಹ ಕಾರ್ಯ ಗಳು ನಡೆಯುವುದಿಲ್ಲ. ಅದನ್ನರಿತು ಸಂಪತ್ತಿನ ಸದ್ವಿನಿಯೋಗ ಮಾಡಿಕೊಳ್ಳು ವವನ ಶ್ರೇಷ್ಠ ಗುಣಗಳು ಎಲ್ಲಾ ಕಡೆಗಳಲ್ಲೂ ಪ್ರಶಂಸನೀಯವಾಗುತ್ತವೆ.

ವಿದ್ವಾAಸರನ್ನು ಎಲ್ಲರೂ ಪ್ರಶಂಸಿಸುತ್ತಾರೆ : ಯಾವನು ವಿದ್ಯೆಯನ್ನು ಪಡೆದುಕೊಂಡಿರುವನೋ, ಧರ್ಮಾಚರಣೆಯಿಂದ ಸಜ್ಜನ, ಶ್ರೇಷ್ಠನೆನಿಸಿ ಕೊಂಡಿರುವನೋ, ಅಂತಹ ವಿದ್ಯಾವಂತನ ಪ್ರಶಂಸೆಯು ಯಥಾರ್ಥವಾಗಿರು ತ್ತದೆ. ಅಂತಹ ವಿದ್ಯಾವಂತನನ್ನೇ ಎಲ್ಲರೂ ಅನುಮೋದಿಸುತ್ತಾರೆ. ಅಂತಹವನ ಸಂಗವನ್ನೇ ಎಲ್ಲರೂ ಬಯಸುತ್ತಾರೆ.

ಸ್ತುತಿ ಅಥವಾ ಪ್ರಶಂಸೆ : ಯಾವುದನ್ನು ವಿದ್ಯಾವಂತರು ಶ್ರೇಷ್ಠ ಪುರುಷರು ಒಪ್ಪಿಕೊಳ್ಳುತ್ತಾರೋ, ಅದೇ ನಿಜವಾದ ಸ್ತುತಿ ಅಥವಾ ಪ್ರಶಂಸೆ ಎನಿಸಿಕೊಳ್ಳುತ್ತದೆ. ಯಾವುದರಿಂದ ತನ್ನ ಮತ್ತು ತನ್ನ ಸಂತಾನದ ಏಳಿಗೆಯಾಗುತ್ತದೆಯೋ ಅದೇ ಧರ್ಮಮಾರ್ಗ ಎನಿಸಿಕೊಳ್ಳು ತ್ತದೆ. ಯಾವ ಸೇವಾಧರ್ಮವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೋ, ಅದೇ ಪರೋಪಕಾರವೆನಿಸಿಕೊಳ್ಳುತ್ತದೆ ಅಂತಹ ಶ್ರೇಷ್ಠಕರ್ಮಾ ಚರಣೆಗಳಲ್ಲಿ ಎಲ್ಲರೂ ಆನಂದವನ್ನು ಅನುಭವಿಸುತ್ತಾರೆ.

ವಿದ್ವಾಂಸರೇ ಧರ್ಮಮಾರ್ಗದಲ್ಲಿ ನಡೆಯುವವರಾಗುತ್ತಾರೆ : ವಿದ್ಯೆಯೊಂದೇ ಅವಿದ್ಯೆಯ ಆ ದಡವನ್ನು ತಲಪಿಸುವಂತಹ ಉಪಾಯವಾಗಿದೆ. ಅಂತಹ ವಿದ್ಯಾವಂತರೇ ಧರ್ಮ ಮಾರ್ಗ ದಲ್ಲಿ ನಡೆಯುತ್ತಾರೆ. ಅವರೇ ಯಥಾರ್ಥವನ್ನು ತಿಳಿಸಿಕೊಡುವ ಉಪದೇಶಕರಾಗಿರುತ್ತಾರೆ. ಆದ್ದರಿಂದ ಯಥಾರ್ಥವನ್ನು ಅರಿಯಲು ಅಂತಹ ವಿದ್ವಾಂಸರನ್ನೇ ಆಶ್ರಯಿಸಬೇಕು.

ಮಾತಾಪಿತೃಗಳು ತಮ್ಮ ಸಂತಾನವನ್ನು ಹೇಗೆ ವೃದ್ಧಿಸಿಕೊಳ್ಳಬೇಕು : ಭೂಮಿ ಮತ್ತು ಸೂರ್ಯರು ದೃಢವಾಗಿ ನಿಂತು ಸ್ಥಾವರ ಜಂಗಮ ರೂಪದಲ್ಲಿರುವ ಚರಾಚರ ಜಗತ್ತನ್ನು ಹೇಗೆ ವಿಧವಿಧ ರೀತಿಯಿಂದ ಪಾಲನೆ ಮಾಡಿ ವೃದ್ಧಿಗೊಳಿಸು ತ್ತವೆಯೋ, ಅದೇ ರೀತಿಯಲ್ಲಿ ತಂದೆ-ತಾಯಿಯರು, ಅತಿಥಿ, ಆಚಾರ್ಯರು ದೃಢವಾಗಿದ್ದು ತಮ್ಮ ಸಂತಾನವನ್ನು, ಶಿಷ್ಯರನ್ನು ಉತ್ತಮ ರೀತಿಯಲ್ಲಿ ರಕ್ಷಣೆ ಮತ್ತು ವಿದ್ಯೆಯನ್ನು ಪ್ರದಾನ ಮಾಡುತ್ತಾ ಬೆಳೆಸಬೇಕಾಗಿದೆ.

ಪ್ರಜಾಜನರ ರಕ್ಷಣೆ ಹೇಗಾಗುತ್ತದೆ : ಪೃಥಿವ್ಯಾದಿ ಪದಾರ್ಥಗಳು ಹೇಗೆ ಸ್ಥಾವರ ಜಂಗಮಾದಿ ಸಮಸ್ತ ಜೀವರಾಶಿಗಳ ರಕ್ಷಣೆ ಪಾಲನೆಗಳನ್ನು ಮಾಡುತ್ತವೆಯೋ, ಹಾಗೆಯೇ ತಂದೆ-ತಾಯಿಗಳು, ಆಚಾರ್ಯ, ಶಾಸಕರು ಸಮಸ್ತ ಪ್ರಜಾಜನರ ರಕ್ಷಣೆ ಪಾಲನೆಯನ್ನು ಮಾಡಬೇಕು.

ಸಂಸಾರ ಚಕ್ರದಲ್ಲಿ ಪರಸ್ಪರರ ರಕ್ಷಣೆ ಅನಿವಾರ್ಯ : ಯಾವ ತಂದೆ-ತಾಯಿಯರು ತಮ್ಮ ಸಂತಾನವನ್ನು ಅನ್ನ, ಜಲ, ವಿದ್ಯೆಯನ್ನು ಕೊಡುವವರಾಗಿ ಪಾಲನೆಯನ್ನು ಮಾಡುವುದಿಲ್ಲವೋ, ಅವರು ಧರ್ಮಮಾರ್ಗದಿಂದ ಪತಿತ ರಾಗುತ್ತಾರೆ ಹಾಗೂ ಪುತ್ರಾದಿ ಸಂತತಿಗಳು ತಮ್ಮ ಜನನೀ ಜನಕರ ರಕ್ಷಣೆ, ಪಾಲನೆ ಮಾಡುವುದಿಲ್ಲವೋ, ಅಂತಹ ಸಂತಾನವು ಸಹ ಧರ್ಮಮಾರ್ಗದಿಂದ ಭ್ರಷ್ಟವಾಗುತ್ತದೆ. ಆದ್ದರಿಂದ ಸಂಸಾರ ಚಕ್ರದಲ್ಲಿ ಪರಸ್ಪರರ ಅವಲಂಬನೆ ಮತ್ತು ರಕ್ಷಣೆ ಅನಿವಾರ್ಯವೆಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.

ಎಲ್ಲರನ್ನು ಪ್ರಸನ್ನಗೊಳಿಸಬೇಕು : ಸೂರ್ಯಚಂದ್ರರಿಬ್ಬರೂ ತನ್ನ ಬೆಳಕಿನ ಕಿರಣಗಳಿಂದ ಬ್ರಹ್ಮಾಂಡದ ಸಮಸ್ತ ಪದಾರ್ಥಗಳೊಂದಿಗೆ ಸಂಯೋಗಗೊಳಿಸಿ ಸುಖಿಗಳನ್ನಾಗಿಸುತ್ತಾರೋ, ಹಾಗೆಯೇ ವೈಶ್ಯರು ಅನ್ನಾದಿ ಪದಾರ್ಥಗಳನ್ನು ಕೊಟ್ಟು ವಿದ್ಯಾವಂತರು ಜ್ಞಾನಸಂಪತ್ತನ್ನು ಕೊಟ್ಟು ಎಲ್ಲರನ್ನೂ ಪ್ರಸನ್ನಗೊಳಿಸುವತ್ತ ಪ್ರವೃತ್ತರಾಗಬೇಕು.

ಉಪದೇಶಕನ ಬೋಧನೆ ಹೇಗಿರಬೇಕು : ಉಪದೇಶಕನು ಉಪದೇಶ ಕೇಳಿಸಿಕೊಳ್ಳುವವನಿಗೆ ಈ ರೀತಿ ಬೋಧಿಸಬೇಕು. ಪ್ರಿಯಕರವೂ, ಲೋಕ ಹಿತಕಾರಿಯೂ ಆದ ವಚನಗಳನ್ನು ನನ್ನಿಂದ ನೀನು ಹೇಗೆ ಕೇಳಿಸಿ ಕೊಂಡಿರುವೆಯೋ, ಅದೇ ರೀತಿ ನೀನು ಬೇರೆಯವರಿಗೂ ಬೋಧಿಸ ಬೇಕು. ತಂದೆ-ತಾಯಿಯರು ಹೇಗೆ ತನ್ನ ಮಕ್ಕಳ ಸೇವೆಯನ್ನು ಮಾಡುವರೋ, ಮಕ್ಕಳೂ ಸಹ ಅದೇ ರೀತಿಯಿಂದ ತಂದೆ-ತಾಯಿಯರ ಸೇವೆಯನ್ನು ಮಾಡಬೇಕು.

ಮಾತಾಪಿತರಿಂದ ಮಕ್ಕಳಿಗೆ ಬೋಧನೆ : ತಂದೆ-ತಾಯಿಯರು ತನ್ನ ಮಕ್ಕಳಿಗೆ ಈ ರೀತಿ ಬೋಧಿಸಬೇಕು. ಧರ್ಮಯುಕ್ತವಾದ ಕರ್ಮಾಚರಣೆಯನ್ನು ನಾವೇನು ಮಾಡುತ್ತಿರುವೆವೋ ನೀವೂ ಅದನ್ನು ಸೇವಿಸಬೇಕು, ಅಂದರೆ ಅನುಕರಿಸಬೇಕು ಮತ್ತು ತಮ್ಮ ಸಂತಾನಗಳಿಗೆ ಇದನ್ನೂ ಹೇಳಬೇಕು. ನಾವು ಮಾಡುತ್ತಿರುವ ಸತ್ಯಾಚರಣೆ ಯನ್ನು ನೀವೂ ಆಚರಿಸಬೇಕು. ಸತ್ಯಕ್ಕೆ ವಿಪರೀತವಾದುದನ್ನು ಆಚರಿಸಬಾರದು. (ಮುಂದುವರಿಯುವುದು)

-ಜಿ. ರಾಜೇಂದ್ರ, ಮಡಿಕೇರಿ.