ಮಡಿಕೇರಿ, ಅ. ೧೬: ‘ಜೀ಼-ಕನ್ನಡ’ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಅಮೋಘ ನೃತ್ಯ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸಿದ ರಾಹುಲ್ ಮತ್ತು ಬೃಂದಾ ಜೋಡಿಗೆ ಮೂರ್ನಾಡು ಗ್ರಾಮಸ್ಥರ ಸ್ವಾಗತ ಸಮಿತಿ ಹಾಗೂ ಕಾಂತೂರು-ಮೂರ್ನಾಡು ಗ್ರಾಮದ ಸಮಸ್ತ ನಾಗರಿಕರ ಪರವಾಗಿ ತಾ. ೧೮ ರಂದು ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೯.೩೦ ಗಂಟೆಗೆ ಮೆರವಣಿಗೆ ಮೂಲಕ ಇಬ್ಬರನ್ನು ಅದ್ಧೂರಿಯಾಗಿ ಕರೆದೊಯ್ದು ಮೂರ್ನಾಡು ಗೌಡ ಸಮಾಜದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಮೂರ್ನಾಡು ಗ್ರಾಮದ ಹೆಸರನ್ನು ಕರ್ನಾಟಕದಲ್ಲಿ ಪಸರಿಸಿದ ಜೋಡಿಯನ್ನು ಅಭಿನಂದಿಸಲು ಸರ್ವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.