ಚೆಟ್ಟಳ್ಳಿ, ಅ. ೧೬: ಮಡಿಕೇರಿಯ ಕೊಡಗು ಸೇವಾ ಕೇಂದ್ರ ವತಿಯಿಂದ ಮುಕ್ಕೋಡ್ಲು ಗ್ರಾಮದ ಪೊನ್ನಚೆಟ್ಟಿರ ರತಿಶ ಎಂಬರಿಗೆ ಅಲ್ಲಿನ ವ್ಯವಸ್ಥಾಪಕ ಅರುಣ್ ಮೊಣ್ಣಪ್ಪ ಅವರು ಗಾಲಿ ಕುರ್ಚಿಯನ್ನು ವಿತರಿಸಿದರು.

ಈಗಾಗಲೇ ೨೦೧೮ ನೇ ಪ್ರಕೃತಿ ವಿಕೋಪದಿಂದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಕೊಡಗು ಸೇವಾ ಕೇಂದ್ರವು ಇಲ್ಲಿಯವರೆಗೆ ಹಲವಾರು ಮನೆ ಕಳೆದುಕೊಂಡ ಜನರಿಗೆ ಮನೆ ಕಟ್ಟಿ ಕೊಟ್ಟಿದ್ದು, ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಪಾವತಿಸುತಿದ್ದು, ಬಡವರ ಆಸ್ಪತ್ರೆ ವೆಚ್ಚ ಭರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಗಾಲಿ ಕುರ್ಚಿಯನ್ನು ಚೋಕಂಡ ಸೂರಜ್ ಸೋಮಯ್ಯ ಅವರು ಕೊಡಗು ಸೇವಾ ಕೇಂದ್ರದ ಸಂಚಾಲಕ ಪಪ್ಪು ತಿಮ್ಮಯ್ಯ ಅವರ ಮುಖಾಂತರ ಸಂಸ್ಥೆಗೆ ನೀಡಿದ್ದರು.