ಮಡಿಕೇರಿ, ಅ. ೧೫: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋ ಸ್ಪರ್ಧೆಯಲ್ಲಿ ಕೊಡಗಿನ ಕುವರ ರಾಹುಲ್ ಎಸ್. ರಾವ್ ಹಾಗೂ ಬೆಂಗಳೂರಿನ ಬೃಂದಾ ಪ್ರಭಾಕರ್ ಜೋಡಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ. ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನದೊಂದಿಗೆ ಫೈಯರ್ ಬ್ರಾಂಡ್‌ಗಳಿಸುತ್ತಾ ಬಂದು ಸೆಮಿಫೈನಲ್ ಇಲ್ಲದೆ ನೇರವಾಗಿ ಫೈನಲ್‌ಗೆ ಪ್ರವೇಶ ಪಡೆದಿದ್ದ ಈ ಜೋಡಿ ಅಂತಿಮ ಸುತ್ತಿನಲ್ಲಿ ದೇಶಭಕ್ತಿಯನ್ನು ಸಾರುವ ‘ಜೈಹೋ’ ಹಾಡಿಗೆ ನರ್ತಿಸುವ ಮೂಲಕ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರಿನ ರಾಹುಲ್ ನೃತ್ಯ ಸಂಯೋಜಕರಾಗಿದ್ದರು. ರಾಹುಲ್ ರಾವ್ ಮೂರ್ನಾಡು ನಿವಾಸಿ ಶ್ರೀಪತಿರಾವ್ ಹಾಗೂ ಕುಸುಮಾವತಿ ದಂಪತಿಯರ ಪುತ್ರ.