*ಗೋಣಿಕೊಪ್ಪ, ಅ. ೧೫: ಕೊರೊನಾ ವಾರಿಯರ್ಸ್ಗಳಾಗಿ ಕಳೆದ ಒಂದೂವರೆ ವರ್ಷಗಳಿಂದ ಸೇವೆಯಲ್ಲಿ ತೊಡಗಿದ ಹರಿಶ್ಚಂದ್ರಪುರದ ಆಶಾ ಕಾರ್ಯಕರ್ತೆ, ಆರೋಗ್ಯ ಕಾರ್ಯಕರ್ತೆ ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರುಗಳಿಗೆ ಗ್ರಾ.ಪಂ. ಸದಸ್ಯ ಪ್ರಮೋದ್ ಗಣಪತಿಯವರು ಸನ್ಮಾನಿಸಿದರು.

ಹರಿಶ್ಚಂದ್ರಪುರ ಕಾವೇರಿ ಮಹಿಳಾ ಸಮಾಜ ಕಟ್ಟಡದಲ್ಲಿ ನಡೆದ ಗಾಂಧಿ ಜಯಂತಿ ಆಚರಣೆಯ ಸಂದರ್ಭ ಗ್ರಾಮಸ್ಥರ ಸಮ್ಮುಖದಲ್ಲಿ ಅಂಗನವಾಡಿ ಕಾರ್ಯಕರ್ತೆ ಲತಾ, ಕಿರಿಯ ಆರೋಗ್ಯ ಕಾರ್ಯಕರ್ತೆ ಶಿವಮ್ಮ, ಆಶಾ ಕಾರ್ಯಕರ್ತೆ ಚಿತ್ರ, ಸಂಜೀವಿನಿ ಒಕ್ಕೂಟದ ಎಲ್.ಸಿ.ಆರ್.ಪಿ ವರಲಕ್ಷಿ÷್ಮ ಇವರುಗಳ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಸಮಾಜದ ಸುತ್ತಲಿನ ಆವರಣವನ್ನು ಶುಚಿಗೊಳಿಸುವ ಕಾರ್ಯ ನಡೆಸಲಾಯಿತು. ಗ್ರಾ.ಪಂ. ಉಪಾಧ್ಯಕ್ಷ ಸವಿತಾ, ಸದಸ್ಯ ಪ್ರಮೋದ್‌ಗಣಪತಿ, ಚೆಪುö್ಪಡೀರ ದ್ಯಾನ್ ಸುಬ್ಬಯ್ಯ, ಧನಲಕ್ಷಿ÷್ಮ, ಮಂಜುಳಾ, ಸುಲೈಖ, ಶಾಹಿನ, ಅಫ್ಸಲ್, ಶರತ್‌ಕಾಂತ್, ಅಂಕಿತ್‌ಪೊನ್ನಪ್ಪ, ಪೊನ್ನಂಪೇಟೆ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ, ಕಾರ್ಯಕರ್ತರಾದ ಸ್ವಾಮಿ, ಶೋಬಿತ್, ಸಿದ್ದಿಕ್, ಧನಲಕ್ಷಿ÷್ಮ, ಹಾಜರಿದ್ದರು.