ಮಡಿಕೇರಿ, ಅ. ೧೫: ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಡಿಕೇರಿ ನಗರದ ಗುರುಭವನ ಸಭಾಂಗಣದಲ್ಲಿ ಮಡಿಕೇರಿ ತಾಲೂಕು ಹಾಗೂ ಮಡಿಕೇರಿ ನಗರಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಏರ್ಪಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷ ರವಿಗೌಡ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಅತಿಥಿಗಳಾಗಿ ಕೊಡಗು ಜಿಲ್ಲಾಧ್ಯಕ್ಷ ಬಿ.ಕೆ. ಜಗದೀಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ವೀರಾಜಪೇಟೆ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಭಾವ ಮಾಲ್ದಾರೆ ಅವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಅತಿಥಿ ಭಾಷಣ ನೆರವೇರಿಸಿದರು. ಆನಂತರ ಆಯ್ಕೆಯಾದ ಮಡಿಕೇರಿ ತಾಲೂಕು ಉಪಾಧ್ಯಕ್ಷ ನಾಗೇಶ್. ತಾಲೂಕು ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಸತೀಶ್, ತಾಲೂಕು ಉಪ ಕಾರ್ಯದರ್ಶಿ ಅಕ್ಷಿತ್, ತಾಲೂಕು ಮಹಿಳಾ ಅಧ್ಯಕ್ಷರಾಗಿ ರೋಹಿಣಿ. ಬಿ.ವಿ., ಮಡಿಕೇರಿ ನಗರ ಅಧ್ಯಕ್ಷ ದೇವೋಜಿ, ಮಡಿಕೇರಿ ನಗರ ಮಹಿಳಾ ಅಧ್ಯಕ್ಷೆ ಮಿನಾಜ್ ಪ್ರವೀಣ್, ಮಡಿಕೇರಿ ನಗರ ಗೌರವಾಧ್ಯಕ್ಷ ವಿನು, ಮಡಿಕೇರಿ ನಗರ ಮಹಿಳಾ ಉಪಾಧ್ಯಕ್ಷೆ ಯಕ್ಷಿತ ಮಿಲನ್, ಮಡಿಕೇರಿ ನಗರ ಮಹಿಳಾ ಕಾರ್ಯದರ್ಶಿ ಪೂರ್ಣಿಮಾ, ಮಡಿಕೇರಿ ನಗರ ಮಹಿಳಾ ಉಪ ಕಾರ್ಯದರ್ಶಿ ಪವಿತ್ರ ರೈ, ಮಡಿಕೇರಿ ನಗರ ಉಪಾಧ್ಯಕ್ಷ ಭರತ್, ನಗರ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಉಪ ಕಾರ್ಯದರ್ಶಿ ನವಚೇತನ್. ಖಜಾಂಚಿ ಸಮೀರ್, ಸಂಘಟನಾ ಕಾರ್ಯದರ್ಶಿ ಶೇಖರ್, ಮೂರ್ನಾಡು ಹೋಬಳಿ ಅಧ್ಯಕ್ಷ ವಸಂತ್ ಅವರುಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಕಾರ್ಯಕ್ರಮವನ್ನು ಸತೀಶ್ ಹೆಚ್.ಆರ್. ನಿರೂಪಿಸಿದರೆ, ಭರತ್ ಸ್ವಾಗತಿಸಿ, ವಂದಿಸಿದರು.