ಗೋಣಿಕೊಪ್ಪಲು, ಅ. ೧೫: ದಕ್ಷಿಣ ಕೊಡಗಿನ ಕಿರುಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಮಟಮಟ ಮಧ್ಯಾಹ್ನ ಗುಂಡಿನ ಮೊರೆತ ಕೇಳಿಬಂದಿದ್ದು, ಹತ್ಯೆ ಮಾಡಿದ ವ್ಯಕ್ತಿ ಕೂಡ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಗುಂಡು ಹಾರಿಸಿದ ವ್ಯಕ್ತಿ ಆಲೆಮಾಡ ಸೋಮಯ್ಯ (ಸಾಗರ್-೫೪) ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದರೆ, ಪತ್ನಿ ಯಶೋಧ(೪೭) ಹಾಗೂ ಸಂಬAಧಿಕ ಆಲೆಮಾಡ ಮುತ್ತಪ್ಪ (ಮಧು-೪೪), ಗುಂಡೇಟಿಗೆ ಬಲಿಯಾಗಿದ್ದಾರೆ. ಕಿರುಗೂರು ನಿವಾಸಿಯಾಗಿರುವ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕೌಟುಂಬಿಕ ವಿಚಾರಕ್ಕೆ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಕೌಟುAಬಿಕ ಕಲಹ
ಆತ್ಮಹತ್ಯೆಗೆ ಶರಣಾದ ಸಾಗರ್ ಮೊದಲ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು ಪತ್ನಿಯನ್ನು ಬಿಟ್ಟು ಇತ್ತೀಚೆಗೆ ಟಿ.ಶೆಟ್ಟಿಗೇರಿ ಮೂಲದ ಗುಂಡೇಟಿಗೆ ಬಲಿಯಾದ ಅಂಗನವಾಡಿ ಕಾರ್ಯಕರ್ತೆ ಯಶೋಧ ಅವರನ್ನು ಎರಡನೇ ವಿವಾಹವಾಗಿ ಕಿರುಗೂರಿನ ಮನೆಯಲ್ಲಿ ವಾಸವಾಗಿದ್ದರು. ಇಬ್ಬರಿಗೂ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಆರೋಪಿ ಸಾಗರ್ ಮನೆಯಲ್ಲಿ ಸದಾ ಕ್ಷÄಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಆಯುಧ ಪೂಜೆ ದಿನದಂದು ಪತ್ನಿ ಯಶೋಧ ಹಾಗೂ ಮಗಳು ಸೇರಿದಂತೆ ಆತ್ಮೀಯ ಸ್ನೇಹಿತರು ಮೈಸೂರಿಗೆ ತೆರಳಿದ್ದರು. ರಾತ್ರಿ ವೇಳೆಗೆ ಮನೆಗೆ ಆಗಮಿಸಿದ್ದಾರೆ. ಈ ವಿಷಯದಲ್ಲಿ ಸುಧೀರ್ ತನ್ನ ಪತ್ನಿಯೊಂದಿಗೆ ರಾತ್ರಿಯಿಂದ ಜಗಳ ತೆಗೆದಿದ್ದ ಬೆಳಿಗ್ಗೆಯಾದರೂ ಗಲಾಟೆ, ಮಾತಿನ ಚಕಮಕಿ ಮುಂದುವರೆದಿತ್ತು.
ಮಗಳನ್ನು ಕೂಡಿ ಹಾಕಿ ಅಮ್ಮನ ಮೇಲೆ ಗುಂಡೇಟು
ಮಾತಿಗೆ ಮಾತು ಬೆಳೆದು ತಾಳ್ಮೆ ಕಳೆದುಕೊಂಡ ಸುಧೀರ್ ಮನೆಯಲ್ಲಿದ್ದ ಮಗಳನ್ನು ಒಂದು ಕೋಣೆಯಲ್ಲಿರಿಸಿ ಬಾಗಿಲು ಭದ್ರಪಡಿಸಿ ಇತ್ತೀಚೆಗೆ ಖರೀದಿಸಿದ್ದ ಬಂದೂಕಿನಿAದ ‘ಬೆಡ್ ರೂಮ್’ನಲ್ಲಿ ಅಳುತ್ತಾ ಕುಳಿತಿದ್ದ ಪತ್ನಿ ಯಶೋಧ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ಯಶೋಧ ಕುಸಿದು ಬಿದ್ದು ಮಗಳನ್ನು ಕರೆಯುವ ಪ್ರಯತ್ನ ಮಾಡಿದ್ದಾಳೆ.
(ಮೊದಲ ಪುಟದಿಂದ) ಆದರೆ ಮಗಳನ್ನು ಕೋಣೆಯಲ್ಲಿ ಬೀಗ ಹಾಕಿ ಭದ್ರಪಡಿಸಿದ್ದ ಕಾರಣ ಹೊರ ಬರಲು ಸಾಧ್ಯವಾಗಲಿಲ್ಲ.
ಅಮಾಯಕ ಬಲಿ
ಅಷ್ಟೋತ್ತಿಗಾಗಲೇ ಸಂಬAಧಿ ಮಧು ಅಡಿಕೆಯನ್ನು ತುಂಬಲು ತನ್ನ ಟಿಲ್ಲರ್‌ನೊಂದಿಗೆ ಮನೆಯ ಅಂಗಳಕ್ಕೆ ಆಗಮಿಸಿ ಟಿಲ್ಲರ್ ಹಿಂದೆ ತೆಗೆಯುತ್ತಿದ್ದಂತೆಯೇ ಕೋವಿಯೊಂದಿಗೆ ಬಂದ ಸಾಗರ್ ಮಧುವಿನ ಮೇಲೆ ಗುಂಡು ಹೊಡೆದಿದ್ದಾನೆ. ಇದರಿಂದ ಸ್ಥಳದಲ್ಲಿಯೇ ಮಧು ತೀವ್ರ ರಕ್ತಸ್ರಾವವಾಗಿ ಪ್ರಾಣ ಬಿಟ್ಟಿದ್ದಾನೆ. ಏನೂ ತಿಳಿಯದ ಮಧು ಸಾಗರ್‌ನ ಹುಚ್ಚಾಟಕ್ಕೆ ಬಲಿಯಾಗಿದ್ದಾನೆ. ಸ್ವಲ್ಪ ತಡವಾಗಿ ಮಧು ಮನೆ ಬಳಿ ಆಗಮಿಸಿದ್ದಾರೆ ಅನಾಹುತ ತಪ್ಪಿ ಪ್ರಾಣಾಪಾಯದಿಂದ ಪಾರಾಗುತ್ತಿದ್ದ. ಈ ಘಟನೆಯಿಂದ ತಬ್ಬಿಬ್ಬಾದ ಆರೋಪಿ ಸಾಗರ್ ಕೋವಿಯನ್ನು ಮನೆಯಲ್ಲಿಟ್ಟು ಓಡಿ ಅನತಿ ದೂರದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇತ್ತ ಯಶೋಧಳÀ ಮಗಳು ಸಂಬAಧಿಕರಿಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ, ಅಕ್ಕಪಕ್ಕದ ಸಂಬAಧಿಕರು ಮನೆಯ ಬಳಿ ಬಂದು ನೋಡುವ ವೇಳೆ ಮಧು ಮನೆಯ ಅಂಗಳದಲ್ಲಿ ಅಂಗಾತನಾಗಿ ಬಿದ್ದಿದ್ದಾನೆ. ಮನೆಯ ಒಳಗೆ ಯಶೋಧ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದಳು. ಕೂಡಲೇ ಆ್ಯಂಬ್ಯುಲೆನ್ಸ್ ಮೂಲಕ ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆ ಸಾಗಿಸಲಾಯಿತು. ಇಲ್ಲಿ ಪ್ರಥಮ ಚಿಕಿತ್ಸೆ ನೀಡಿದ ತರುವಾಯ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಮಾರ್ಗಮಧ್ಯೆ ಯಶೋಧ ಕೊನೆಯುಸಿರೆಳೆದಿದ್ದಾರೆ. ಆಕೆಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಸುಧೀರ್‌ನ ಮೃತದೇಹವನ್ನು ಗೋಣಿಕೊಪ್ಪ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕೆರೆಯಲ್ಲಿದ್ದ ಮೃತದೇಹವನ್ನು ಮುಳುಗು ತಜ್ಞರು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಗೋಣಿಕೊಪ್ಪ ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಕೋಪದ ಕೈಗೆ ಬುದ್ದಿ ಕೊಟ್ಟ ಸಾಗರ್ ತಾನು ಬಲಿಯಾಗುವುದಲ್ಲದೆ ಪತ್ನಿಯನ್ನು ಕೊಲೆಗೈದು ಮಗಳನ್ನು ಅನಾಥ ಮಾಡಿದ್ದಾನೆ. ಕುಟುಂಬಕ್ಕೆ ಆಧಾರವಾಗಿದ್ದ ಮಧುವನ್ನು ಕಳೆದುಕೊಂಡ ವಯಸ್ಸಾದ ತಂದೆ ಮರಗುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಲಿನ ಗ್ರಾಮದ ಜನತೆ ಸಾಗರೋಪಾದಿಯಲ್ಲಿ ಘಟನೆ ನಡೆದ ಸ್ಥಳಕ್ಕೆ ಆಗಮಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಎಸ್.ಪಿ. ಭೇಟಿ
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುದ್ದಿ ತಿಳಿದ ಡಿವೈಎಸ್ಪಿ ಜಯಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಜಯರಾಂ, ಎಸ್.ಐ.ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮೃತಪಟ್ಟ ವ್ಯಕ್ತಿ ಮಧುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಿದರು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - ಹೆಚ್.ಕೆ.ಜಗದೀಶ್