ಮಡಿಕೇರಿ, ಅ. ೧೩ : ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಇಲ್ಲಿನ ಮುಖ್ಯ ರಸ್ತೆಯ ಕಾಮಧೇನು ಪೆಟ್ರೋಲ್ ಬಂಕ್ ಬಳಿ ಕುಶಾಲಪ್ಪ ಎಂಬವರು ಚಾಲಿಸುತ್ತಿದ್ದ ಬೈಕ್ (ಕೆ.ಎ.೧೨ ಕೆ.೬೫೬೬) ಹಾಗೂ ಕುಶಾಲನಗರದ ಉಸ್ಮಾನ್ ಎಂಬವರು ತೆರಳುತ್ತಿದ್ದ ಕಾರು (ಕೆ.ಎ.೧೨ ಝಡ್೩೨೨೬) ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಕುಶಾಲಪ್ಪ ಅವರಿಗೆ ತಲೆ ಹಾಗೂ ಕೈ,ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ನಗರ ಸಂಚಾರಿ ಪೊಲೀಸರು ಭೇಟಿ ಪರಿಶೀಲಿಸಿ, ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.