ಭಾಗಮಂಡಲ, ಅ. ೧೩ : ಇಲ್ಲಿನ ಕಾವೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಇಂದು ಭಾಗಮಂಡಲದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸಂಘದ ೨೦ನೇ ವರ್ಷದ ಸ್ವಚ್ಛತಾ ಕಾರ್ಯಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದ ಚಾಲನೆ ನೀಡಿದರು. ಭಾಗಮಂಡಲದ ಮುಖ್ಯದ್ವಾರದಿಂದ ಮಾರ್ಕೆಟ್‌ವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಸಂಘದ ಅಧ್ಯಕ್ಷ ಪಾಣತ್ತಲೆ ಬಾಲಕೃಷ್ಣ, ಉಪಾಧ್ಯಕ್ಷ ಬಾರಿಕೆ ಪ್ರಕಾಶ್, ಕಾರ್ಯದರ್ಶಿ ಶ್ರೀನಾಥ್ ಸೇರಿದಂತೆ ಆಟೋ ಚಾಲಕರ ಸಂಘದ ಸದಸ್ಯರು ಭಾಗವಹಿಸಿದ್ದರು.