ಕೂಡಿಗೆ, ಅ. ೧೩: ಕೂಡುಮಂಗಳೂರು ಗ್ರಾ. ಪಂ. ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ರಾಜಮ್ಮ ಎಂಬವರ

ಪುತ್ರ ಗಣೇಶ್ (೩೫) ತನ್ನ

ಬೈಕ್‌ನಲ್ಲಿ (ಕೆಎ೧೨ ಆರ್೪೦೨೨) ಪಿರಿಯಾಪಟ್ಟಣದಿಂದ ಕುಶಾಲನಗರದ ಕಡೆಗೆ ಬರುವ ಸಂದರ್ಭದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊAಡಿರುವ ಮಂತೇನಹಳ್ಳಿ ಗ್ರಾಮ ಬಳಿ ನಿಂತಿದ್ದ ಲಾರಿಯ (ಕೆ, ೧೩ ೬೫೨೦) ಹಿಂಬದಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಗಣೇಶ್ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಗಣೇಶ್ ಪತ್ನಿ ಮತ್ತು ೪ ವರ್ಷದ ಮಗುವನ್ನು ಅಗಲಿದ್ದಾರೆ. ಬೈಲುಕೊಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.