ಮಡಿಕೇರಿ, ಅ. ೧೩: ಭಾರತ ಸರ್ಕಾರದ ನಿರ್ದೇಶನ ಮೇರೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಯು ಕರ್ನಾಟಕದಲ್ಲಿ ತಾ.೧೩ರಿಂದ ರಾಜ್ಯದ ೧೯ ಜಿಲ್ಲೆಗಳಲ್ಲಿ ಸಾಲ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.

ಈ ಪ್ರಯುಕ್ತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಡಿಸಿಸಿಬಿಗಳು, ಎಂಎಫ್‌ಐಗಳು, ಎನ್‌ಬಿಎಫ್‌ಸಿಗಳು ಮತ್ತು ಖಾಸಗಿ ವಲಯದ ಬ್ಯಾಂಕುಗಳು ಮತ್ತು ನಬಾರ್ಡ್ ಮತ್ತು ಕೆವಿಐಸಿ, ಕೆವಿಐಬಿ ಮತ್ತು ಡಿಐಸಿಯಂತಹ ಇತರ ಸರ್ಕಾರಿ ಇಲಾಖೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಮುಖ್ಯವಾಗಿ ಬ್ಯಾಂಕುಗಳಲ್ಲಿ ಲಭ್ಯವಿರುವ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಾಲದ ಅರ್ಜಿಗಳನ್ನು ಸ್ವೀಕರಿಸಲು, ಮಂಜೂರಾತಿ ಅಥವಾ ತಾತ್ವಿಕವಾಗಿ ಮಂಜೂರಾತಿ ಪತ್ರಗಳನ್ನು ವಿತರಿಸಲು ಸಾಲ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಇದರ ನಿಮಿತ್ತ ತಾ.೨೨ರಂದು ಕೊಡಗು ಜಿಲ್ಲಾ ಅಗ್ರಣಿ ಬ್ಯಾಂಕ್ ಸಭಾಂಗಣದಲ್ಲಿ "ಆಜಾದಿ ಕಾ ಅಮೃತ್ ಮಹೋತ್ಸವ್" ದ ಅಂಗವಾಗಿ ಬೆಳಗ್ಗೆ ೧೦.೩೦ ಗಂಟೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕ್ರೆಡಿಟ್ ಔಟ್‌ರೀಚ್ ಕಾರ್ಯಕ್ರಮದಲ್ಲಿ ಪಿಎಂಎAವೈ (ಮುದ್ರಾ), ಸ್ಟ್ಯಾಂಡ್ ಆಫ್ ಇಂಡಿಯಾ, ಪಿಎಂ ಸ್ವನಿಧಿ, ಇಸಿಎಲ್‌ಜಿಎಸ್, ಪಿಎಂಇಜಿಪಿ, ಕೃಷಿ ಮೂಲಸೌಕರ್ಯ ನಿಧಿ ಯೋಜನೆ (ಎಐಎಫ್), ಪಶು ಸಂಗೋಪನಾ ಮೂಲ ಸೌಕರ್ಯ ಅಭಿವೃದ್ಧಿ ನಿಧಿ ಯೋಜನೆ (ಎಎಚ್‌ಐಡಿಎಫ್), ಕೃಷಿ, ಎಂಎಸ್‌ಎAಇ, ಚಿಲ್ಲರೆ, ಶಿಕ್ಷಣ, ವಸತಿ ಸಾಲಗಳು ಮತ್ತು ಇತರ ಆತ್ಮನಿರ್ಭರ ಭಾರತ್ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಜೊತೆಗೆ ಪಿಎಂಎಸ್‌ಬಿವೈ, ಪಿಎಂಜೆಜೆಬಿವೈ, ಎಪಿವೈ ನಂತಹ ವಿವಿಧ ಪಿಎಂ ಜನ ಸುರಕ್ಷಾ ಯೋಜನೆಗಳ ಬಗ್ಗೆ ವಿಶೇಷ ಜಾಗೃತಿ ಅಭಿಯಾನವನ್ನು ನಡೆಸಲು ಬ್ಯಾಂಕುಗಳಿAದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು.

ಆದ್ದರಿಂದ ಸಾರ್ವಜನಿಕರು ತಮ್ಮ ತಮ್ಮ ಬ್ಯಾಂಕುಗಳಲ್ಲಿ ಹೊಸದಾಗಿ ಸಾಲ ಬೇಕಿದ್ದರೆ ಸಾಲದ ಅರ್ಜಿಗಳನ್ನು ಸಲ್ಲಿಸಲು ಲೀಡ್ ಬ್ಯಾಂಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.