ಸೋಮವಾರಪೇಟೆ,ಅ.೧೩: ಇಲ್ಲಿನ ನಂ.೩೮೩ನೇ ಸೋಮವಾರಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ವತಿಯಿಂದ ರೈತ ಕೃಷಿ ಭಂಡಾರ ತಾ. ೧೫ ರಂದು ಬೆಳಿಗ್ಗೆ ೮.೪೪ಕ್ಕೆ ಸಹಕಾರ ಕೂಟ ಕಟ್ಟಡದಲ್ಲಿ ಉದ್ಘಾಟನೆ ಯಾಗಲಿದೆ.

ಶಾಸಕ ಅಪ್ಪಚ್ಚು ರಂಜನ್, ಸಂಘದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಹಿರಿಯ ಸಹಕಾರಿಗಳಾದ ಬಿ.ಡಿ. ಮಂಜುನಾಥ್, ಎಸ್.ಬಿ. ಭರತ್ ಕುಮಾರ್, ಕೆ.ಟಿ. ಪರಮೇಶ್, ಬಿ.ಎಂ. ರಾಮ್‌ಪ್ರಸಾದ್, ಎಚ್.ಕೆ. ಮಾದಪ್ಪ, ಬಿ.ಎ. ಧರ್ಮಪ್ಪ, ವಿಶ್ವನಾಥ್‌ರಾಜೇ ಅರಸ್ ಸೇರಿದಂತೆ ಇತರರು ಭಾಗವಹಿ ಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.