ಮಡಿಕೇರಿ, ಅ. ೧೨: ಅಮಾಯಕರನ್ನು., ಉದ್ಯೋಗ ಅವಶ್ಯಕತೆಯಿರುವವರನ್ನೇ ಪರಿಚಯಿಸಿಕೊಂಡು., ನಂಬಿಕೆ ಮೂಡುವಂತೆ ಮಾಡಿ, ಹಣ ಲಪಟಾಯಿಸಿ ವಂಚಿಸುವದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಪುನಿತ್‌ಕುಮಾರ್ ತನ್ನ ಸ್ವಗ್ರಾಮ ಪುತ್ತೂರಿನಲ್ಲೂ ರೂ.೪೦ ಲಕ್ಷ ವಂಚಿಸಿದ್ದಾನೆ.

ಪುತ್ತೂರು ನಿವಾಸಿ ಶಶಾಂಕ್ ಎಂಬಾತನನ್ನು ಪರಿಚಯಿಸಿಕೊಂಡ ಬಳಿಕ ಆತನಿಗೆ ಸರಕಾರಿ ಉದ್ಯೋಗ ಕೊಡಿಸುವದಾಗಿ ನಂಬಿಸಿದ್ದಾನೆ. ಅಲ್ಲದೆ, ಆತನ ಮೂಲಕ ಇನ್ನೂ ಹಲವರಿಗೆ ಕೆಲಸ ಕೊಡಿಸುವದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈತನ ಮಾತಿಗೆ ಮರುಳಾಗಿ ಶಶಾಂಕ್ ಊರಿನ ಕೆಲವರಿಂದ ಹಣ ಸಂಗ್ರಹಿಸಿ ಒಟ್ಟು ರೂ.೪೦ಲಕ್ಷ ಹಣವನ್ನು ಪುನಿತ್‌ಗೆ ನೀಡಿದ್ದಾನೆ.

ನಂತರದಲ್ಲಿ ಪುನಿತ್ ಕೊಟ್ಟಿರುವದು ನಕಲಿ ನೇಮಕಾತಿ ಪತ್ರ ಎಂದು ಅರಿವಾದ ಬಳಿಕ ಶಶಾಂಕ್ ಹಣವನ್ನು ಹಿಂದಿರುಗಿಸುವAತೆ ದುಂಬಾಲು ಬಿದ್ದಿದ್ದಾನೆ. ಹಣ ವಾಪಸ್ ನೀಡುವದಾಗಿ ಭರವಸೆ ಕೊಟ್ಟ ಪುನಿತ್ ಶಶಾಂಕ್‌ನನ್ನು ತನ್ನೊಂದಿಗೆ ಇರಿಸಿಕೊಂಡಿದ್ದಾನೆ. ಈ ನಡುವೆ ವಿಷಯ ಪೊಲೀಸರಿಗೆ ಗೊತ್ತಾಗಿದೆ. ಇದನ್ನು ತನ್ನ ಸ್ವಾರ್ಥಕ್ಕೆ

(ಮೊದಲ ಪುಟದಿಂದ) ಬಳಸಿಕೊಂಡ ಪುನಿತ್, ನೀನು ಪುತ್ತೂರಿಗೆ ಹೋದರೆ ನಿನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂದು ಶಶಾಂಕ್‌ನನ್ನು ಬೆದರಿಸಿ ಇರಿಸಿಕೊಂಡಿದ್ದಾನೆ. ತನ್ನ ಹಣಕ್ಕಾಗಿ ಪುನಿತ್‌ನೊಂದಿಗೆ ಇದ್ದ ಶಶಾಂಕ್‌ನನ್ನು ಕೂಡ ತನ್ನ ಕಾರ್ಯಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ. ಸಂಗ್ರಹಿಸಲಾಗುವ ಹಣವನ್ನು ಶಶಾಂಕ್‌ನ ಖಾತೆಗೆ ವರ್ಗಾಯಿಸಿಕೊಂಡು ಆತನ ಅಕೌಂಟ್ ಈತನೇ ಆಪರೇಟ್ ಮಾಡುತ್ತಿದ್ದ..!

?ಕುಡೆಕಲ್ ಸಂತೋಷ್