ಮಡಿಕೇರಿ, ಅ. ೧೨: ಭಾರತೀಯ ಸೇನೆಯಲ್ಲಿ ವೈದ್ಯಕೀಯ ವಿಭಾಗದಲ್ಲಿ ಂviಚಿಣioಟಿ ಒeಜiಛಿiಟಿe ತಜ್ಞರಾಗಿರುವ ವಿಂಗ್ ಕಮಾಂಡರ್ ಶ್ರೀನಿವಾಸ್ ಗೋಕುಲನಾಥ್ ಅವರು ಅಖಂಡ ಕರ್ನಾಟಕವನ್ನು ಸೈಕ್ಲಿಂಗ್ ಮೂಲಕ ಸುತ್ತುವ ಸಾಹಸಕ್ಕೆ ಕೈಹಾಕಿದ್ದಾರೆ.

ವಿಂಗ್ ಕಮಾಂಡರ್ ಶ್ರೀನಿವಾಸ್ ಗೋಕುಲನಾಥ್ ಭಾರತದ ಮೊದಲ ಅಲ್ಟಾç ಸೈಕ್ಲಿಸ್ಟ್... ಅವರ ಲೇಹ್ ಟು ಕನ್ಯಾಕುಮಾರಿ ಅತೀವೇಗದ ಸೈಕ್ಲಿಂಗ್ ದಾಖಲೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದಿದೆ.

ರೇಸ್ ಅರೌಂಡ್ ಅಮೇರಿಕಾ ಸೈಕ್ಲಿಂಗ್ ಮಾಡಿದ ಮೊದಲ ಭಾರತೀಯ ಇವರು. ವಿಂಗ್ ಕಮಾಂಡರ್ ಶ್ರೀನಿವಾಸ್ ಗೋಕುಲನಾಥ್ ಮೂಲತಃ ಬೆಂಗಳೂರಿನವರಾಗಿದ್ದು, ಈಗ ಈಶಾನ್ಯ ಭಾಗದ ಜೊಹರಾಹಟ್ ವಾಯುನೆಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ತಾ. ೮ ರಂದು ಬೆಂಗಳೂರಿನಿAದ ಹೊರಟ ಇವರು ತಾ. ೧೨ ರಂದು ಸಂಜೆ ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಬಂದಾಗ ನಾಗರಿಕರ ಪರವಾಗಿ ಅವರನ್ನು ಸ್ವಾಗತಿಸಲಾಯಿತು. ಸೇವಾ ಭಾರತಿಯ ಉಪಾಧ್ಯಕ್ಷರಾಗಿರುವ ಮಹೇಶ್ ಅವರು ವಿಂಗ್ ಕಮಾಂಡರ್ ಶ್ರೀನಿವಾಸ್ ಗೋಕುಲನಾಥ್ ಅವರನ್ನು ಸನ್ಮಾನಿಸಿದರು. ಅರವಳಿಕೆ ತಜ್ಞರಾದ ಡಾ. ಅಯ್ಯಪ್ಪ ದಂಬೆಕೋಡಿ, ಮೇಜರ್ ಡಾ. ಕುಶ್ವಂತ್ ಕೋಳಿಬೈಲು, ಡಾ. ಬಿಪಿನ್ ಮತ್ತಿತರರು ಹಾಜರಿದ್ದರು. ಅವರ ಈ ಸೈಕಲ್ ಯಾನದಲ್ಲಿ ಅವರ ಬೆಂಬಲಕ್ಕಾಗಿ ಶಿವಮೊಗ್ಗ ಮೂಲದ ಮೇಜರ್ ಡಾ. ಅಭಿಜಿತ್ ಕೂಡ ಜೊತೆಗಿದ್ದರು.

ತಾ. ೧೩ ರ ಮುಂಜಾನೆ ಬೆಂಗಳೂರಿನಲ್ಲಿ ತಮ್ಮ ೨೨೪೦ ಕಿಲೋ ಮೀಟರ್‌ನ ರೇಸ್ ಮುಕ್ತಾಯಗೊಳಿಸಿ ದಾಖಲೆ ನಿರ್ಮಿಸಲಿದ್ದಾರೆ.