ಸಿದ್ದಾಪುರ, ಅ. ೧೨: ಮಾಲ್ದಾರೆ ಬಾಡಗ, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವಯೋನಿವೃತ್ತಿ ಆದ ಎ.ಆರ್. ಪಳಂಗಪ್ಪ ಅವರಿಗೆ ಸಹಕಾರ ಸಂಘ ಹಾಗೂ ದವಸ ಭಂಡಾರದ ಆಡಳಿತ ಮಂಡಳಿ ವತಿಯಿಂದ ಸನ್ಮಾನ-ಬೀಳ್ಕೊಡುಗೆ ಸಮಾರಂಭವು ಸಂಘದ ಸಭಾಂಗಣದಲ್ಲಿ ನಡೆಯಿತು. ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿಪತ್ತಿನ ಸಂಘದ ಅಧ್ಯಕ್ಷ ಸಿ.ಎ. ನಂದ ಸುಬ್ಬಯ್ಯ ಮಾತನಾಡಿ, ಪಳಂಗಪ್ಪನವರು ಸಹಕಾರ ಸಂಘದಲ್ಲಿ ಉತ್ತಮ ರೀತಿಯ ಸೇವೆಯನ್ನು ಮಾಡಿದ್ದಾರೆ ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಾಲ್ದಾರೆ ದವಸ ಭಂಡಾರದ ಅಧ್ಯಕ್ಷ ಎಂ.ಎA. ಮಿಟ್ಟೂ ನಂಜಪ್ಪ ಮಾತನಾಡಿ ಪಳಂಗಪ್ಪನವರು ನಿವೃತ್ತಿ ಹೊಂದಿದರೂ ಕೂಡ ಮುಂದಿನ ದಿನಗಳಲ್ಲಿ ಸಹಕಾರ ಸಂಘಕ್ಕೆ ಅವರ ಸಹಕಾರವನ್ನು ನೀಡುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಹೇಳಿದರು. ನಂತರ ನಿವೃತ್ತಿ ಹೊಂದಿದ ಪಳಂಗಪ್ಪನವರಿಗೆ ಅವರ ಪತ್ನಿ ಜಯಮ್ಮ ಅವರೊಂದಿಗೆ ಸಹಕಾರ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಲಾಯಿತು. ಮಾಲ್ದಾರೆ ಬಾಡಗ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಎನ್. ಬೋಪಣ್ಣ, ನಿರ್ದೇಶಕರುಗಳಾದ ಎಂ.ಕೆ ಪ್ರಭಾಕರ್, ಹೆಚ್.ಎಲ್ ಪುಟ್ಟುಸ್ವಾಮಿ, ಬಿ.ಎಸ್ ಬಿದ್ದಪ್ಪ, ಪಿ.ಟಿ. ಯತೀಶ್, ಜಿ.ಬಿ. ಸೋಮಯ್ಯ, ಎಂ. ಶರೀಫ್, ಸಿ.ಎನ್. ಮಾಲತಿ, ಟಿ. ಸುಮಿತ ರಮೇಶ್, ಸಿ.ಸಿ. ಲೀನಾ, ಮಾಜಿ ನಿರ್ದೇಶಕ ವಿವೇಕ್ ಜೋಯಪ್ಪ, ಹಾಗೂ ಡಿ.ಸಿ.ಸಿ. ಬ್ಯಾಂಕ್‌ನ ಹಿರಿಯ ಮೇಲ್ವಿಚಾರಕ ವಿ.ಸಿ. ಅಜಿತ್, ನಿಯೋಜಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಜಿ ವತ್ಸರಾಜ್, ದವಸ ಭಂಡಾರದ ಉಪಾಧ್ಯಕ್ಷ ಚಂಬAಡ ನಾಚಪ್ಪ, ನಿರ್ದೇಶಕರುಗ¼

Áದ ಎಂ.ಕೆ. ಪೂಣಚ್ಚ, ಎಸ್.ಜಿ. ಅಮೇಶ್, ಬಿ.ವೈ. ಕಾರ್ಯಪ್ಪ, ಪಿ.ಎಂ. ಮುತ್ತಪ್ಪ, ಮತ್ತು ಸಿಬ್ಬಂದಿ ವರ್ಗದವರು ಇನ್ನಿತರರು ಹಾಜರಿದ್ದರು.