ಶನಿವಾರಸಂತೆ, ಅ. ೧೨: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮಸಭೆ ನಡೆಯಿತು. ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಜಲಜೀವನ್ ಮಿಷನ್ ಯೋಜನೆಯನ್ನು ಜಾರಿಗೆ ತರುವುದನ್ನು ವಿರೋಧಿಸಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೇದಕುಮಾರ್, ಪ್ರಮುಖರಾದ ಸುಲೈಮಾನ್, ಸುಬ್ರಮಣಿ, ಮಲ್ಲೇಶ್, ಬಿ.ಯು. ಹನೀಫ್, ಮೀಟರ್‌ಗೆ ಹಣ ಪಾವತಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿ, ನೀರಿನ ಟ್ಯಾಂಕ್ ಕೆಲಸ ಪೂರ್ಣವಾಗದೇ ಒಂದು ಯೂನಿಟ್‌ಗೆ ಎಷ್ಟು ಬಿಲ್ ಬರುತ್ತದೆ ಎಂಬ ಕನಿಷ್ಟ ಮಾಹಿತಿ ನೀಡದೆ, ಅವೈಜ್ಞಾನಿಕವಾಗಿ ಮೀಟರ್ ಅಳವಡಿಕೆ ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸದಸ್ಯ ಹನೀಫ್ ಪ್ರತಿಕ್ರಿಯಿಸಿ, ಗುತ್ತಿಗೆದಾರರಿಗೆ ಉಪಯೋಗವಾಗುವ ಜಾಗದಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಮುಂದಾಗಿರುವುದಲ್ಲದೇ, ಸಂಬAಧಪಟ್ಟ ಇಂಜಿನಿಯರ್‌ಗೆ ಅಭಿಪ್ರಾಯ ತಿಳಿಸಿದರೂ, ಗಣನೆಗೆ ತೆಗೆದುಕೊಳ್ಳದೆ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಯೋಜನೆ ಉತ್ತಮವಾಗಿದ್ದರೂ, ಅನುಷ್ಠಾನ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸದಸ್ಯರಾದ ದಿನೇಶ್ ಕುಮಾರ್ ಹಾಗೂ ಮೋಕ್ಷಿತ್ ರಾಜ್ ಮಾತನಾಡಿದರು. ಅಧ್ಯಕ್ಷ ವಿನೋದ್, ಉಪಾಧ್ಯಕ್ಷೆ ಪಾವನಾ, ಸದಸ್ಯರಾದ ಲೀನಾ, ರೇಣುಕಾ, ದಾಕ್ಷಾಯಿಣಿ, ಕಾರ್ಯದರ್ಶಿ ದೇವರಾಜ್, ಸಿಬ್ಬಂದಿ ಹಾಜರಿದ್ದರು.