ಪೊನ್ನಂಪೇಟೆ, ಅ. ೧೨: ವೀರಾಜಪೇಟೆ ಸಮೀಪದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿ ಆವರಣದಲ್ಲಿ ನೂತನ ವಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ಸುಸಜ್ಜಿತ ಗ್ರಂಥಾಲಯವನ್ನು ಲೋಕಾರ್ಪ ಣೆಗೊಳಿಸಲಾಯಿತು.
ಈ ಮೂಲಕ ಜುಮಾ ಮಸೀದಿ ಆವರಣದಲ್ಲಿ ಗ್ರಂಥಾಲಯವೊAದರ ನಿರ್ಮಾಣದ ಹೊಸ ಪರಿಕಲ್ಪನೆ ಹುಟ್ಟುಹಾಕಿ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಮಾದರಿಯಾಗಿದೆ.
ಲೋಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಜನಿಸಿದ ಪುಣ್ಯ ಮಾಸಾರಂಭದ ದಿನದಂದು ನಡೆದ ಕಾರ್ಯಕ್ರಮದಲ್ಲಿ ನಲ್ವತ್ತೋಕ್ಲಿನಲ್ಲಿ ಮೊಹಿದ್ದೀನ್ ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ನೂತನ ಗ್ರಂಥಾಲಯವನ್ನು ಲೋಕಾರ್ಪಣೆ ಗೊಳಿಸಿದರು.
ಗ್ರಾಮದ ನಿವಾಸಿಗಳಿಗೆ ದಿನಪತ್ರಿಕೆಗಳು ಸೇರಿದಂತೆ ಅಗತ್ಯ ಪುಸ್ತಕಗಳನ್ನು ಓದಲು ಸೂಕ್ತ ಸ್ಥಳಾವಕಾಶದ ಕೊರತೆಯನ್ನು ಮನಗಂಡ ಮಸೀದಿ ಆಡಳಿತ ಮಂಡಳಿ ಮಸೀದಿಯ ಆವರಣ ದಲ್ಲೇ ಗ್ರಂಥಾಲಯವೊAದನ್ನು ಸ್ಥಾಪಿಸಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಇದರೊಂದಿಗೆ ಮಸೀದಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಆಡಳಿತ ಮಂಡಳಿ ಆಧುನಿಕ ಕಚೇರಿ ಮತ್ತು ಸುಸಜ್ಜಿತ ಕಾರ್ಯಕಾರಿ ಸಮಿತಿ ಸಭಾಸನ ವನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷ ದುದ್ದಿಯಂಡ ಅಶ್ರಫ್ ಗ್ರಂಥಾಲಯವನ್ನು ಲೋಕಾರ್ಪಣೆ ಗೊಳಿಸಿದರು.
ಗ್ರಾಮದ ನಿವಾಸಿಗಳಿಗೆ ದಿನಪತ್ರಿಕೆಗಳು ಸೇರಿದಂತೆ ಅಗತ್ಯ ಪುಸ್ತಕಗಳನ್ನು ಓದಲು ಸೂಕ್ತ ಸ್ಥಳಾವಕಾಶದ ಕೊರತೆಯನ್ನು ಮನಗಂಡ ಮಸೀದಿ ಆಡಳಿತ ಮಂಡಳಿ ಮಸೀದಿಯ ಆವರಣ ದಲ್ಲೇ ಗ್ರಂಥಾಲಯವೊAದನ್ನು ಸ್ಥಾಪಿಸಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಇದರೊಂದಿಗೆ ಮಸೀದಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಆಡಳಿತ ಮಂಡಳಿ ಆಧುನಿಕ ಕಚೇರಿ ಮತ್ತು ಸುಸಜ್ಜಿತ ಕಾರ್ಯಕಾರಿ ಸಮಿತಿ ಸಭಾಸನ ವನ್ನು ಆಡಳಿತ ಮಂಡಳಿಯ ಉಪಾಧ್ಯಕ್ಷ ದುದ್ದಿಯಂಡ ಅಶ್ರಫ್ ನೌಶಾದ್, ಮತ್ತೋರ್ವ ಧರ್ಮ ಗುರುಗಳಾದ ಜ್ಹಿಯಾದ್ ದಾರಿಮಿ, ಗ್ರಾಮದ ಹಿರಿಯರಾದ ದುದ್ದಿಯಂಡ ಮಾಹಿನ್ ಹಾಜಿ, ದುದ್ದಿಯಂಡ ಮೊಹಮ್ಮದ್, ಗ್ರಾಮದ ಪ್ರಮುಖರಾದ ಕನ್ನಡಿಯಂಡ ಜುಬೈರ್ ಸೇರಿದಂತೆ ಮಹಲಿನ ನಿವಾಸಿಗಳು ಪಾಲ್ಗೊಂಡಿ ದ್ದರು. ಗ್ರಂಥಾಲಯ ಮತ್ತು ಕಚೇರಿ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಸಾಮೂಹಿಕ ಪ್ರಾರ್ಥನೆಗೆ ಮಸೀದಿಯ ಖತೀಬರಾದ ಸಿದ್ದೀಖ್ ಪಾಜ್ಹಿಳಿ ಅವರು ನೇತೃತ್ವ ನೀಡಿದರು.