ಸೋಮವಾರಪೇಟೆ, ಅ. ೧೨: ಬಿಜೆಪಿ ವತಿಯಿಂದ ಜನಸಂಘದ ಸ್ಥಾಪಕರಾದ ದೀನ ದಯಾಳ್ ಉಪಾಧ್ಯಾಯರ ಜನ್ಮ ದಿನವನ್ನು ಸೋಮವಾರಪೇಟೆ ತಾಲೂಕಿನ ಗೌಡಳ್ಳಿಯಲ್ಲಿ ಇತ್ತೀಚೆಗೆ ಆಚರಿಸಲಾಯಿತು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಸ್.ಬಿ. ಭರತ್ ಕುಮಾರ್, ಗೌಡಳ್ಳಿ ಮಂಡಲ ಪ್ರಮುಖ್ ನವೀನ್ ಅಜ್ಜಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಕುಮಾರ್, ಉಪಾಧ್ಯಕ್ಷೆ ರೋಹಿಣಿ ಮಂಜುನಾಥ್, ಸದಸ್ಯರಾದ ಗಣೇಶ್, ಮಲ್ಲಿಕಾ, ವಿಶಾಲಾಕ್ಷಿ ಸೇರಿದಂತೆ ಪ್ರಮುಖರು ಇದ್ದರು.