ಮಡಿಕೇರಿ, ಅ. ೧೨ : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಎಂದೊಡನೆ ನೆನಪಿಗೆ ಬರುವುದು ವೈಭವಯುತ ದಶಮಂಟಪಗಳ ಶೋಭಾಯಾತ್ರೆ. ಅದ್ಧೂರಿ ಆಡಂಬರದೊAದಿಗೆ ವಿಭಿನ್ನ ಕಥಾ ಸಾರಾಂಶದೊAದಿಗೆ ಜಗಮಗಿಸುವ ಬೆಳಕಿನ ನಡುವೆ ಪೈಪೋಟಿಗಿಳಿಯುವ ಮಂಟಪಗಳು ಒಂದಕ್ಕಿAತ ಒಂದು ಆಕರ್ಷಣೀಯವಾಗಿರುತ್ತವೆ.
ಆದರೆ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯೂ ಮಡಿಕೇರಿ ದಸರಾ ಸರಳ ಆಚರಣೆಗೆ ಸೀಮಿತವಾಗಿರುವುದರಿಂದ ಒಂದು ಟ್ರಾö್ಯಕ್ಟರ್ನೊಂದಿಗೆ ಹೆಚ್ಚುವರಿಯಾಗಿ ಒಂದು ವಾಹನವನ್ನು ಬಳಸಲು ಮಾತ್ರ ಮಂಟಪ ಸಮಿತಿಗಳಿಗೆ ಅವಕಾಶ ನೀಡಲಾಗಿದ್ದು, ಅದರಂತೆ ಹತ್ತು ಮಂಟಪ ಸಮಿತಿಗಳೂ ಕೂಡ ಕೇವಲ ಒಂದೊAದು ಟ್ರಾö್ಯಕ್ಟರ್ನಲ್ಲಿ ಮಂಟಪಗಳನ್ನು ತಯಾರಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿವೆ. ಕೆಲವೊಂದು ಮಂಟಪಗಳಲ್ಲಿ ಸಣ್ಣ ಪ್ರಮಾಣದ ಚಲನವಲನಗಳನ್ನು ಕಾಣಬಹುದಾದರೂ ಉಳಿದ ಮಂಟಪಗಳಲ್ಲಿ ಯಾವುದೇ ಚಲನ ವಲನ ಇರುವುದಿಲ್ಲ.
ಸುಮಾರು ನೂರೈವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಪೇಟೆ ಶ್ರೀರಾಮಮಂದಿರ ದೇವಾಲಯ ದಸರಾ ಸಮಿತಿ ದಶಮಂಟಪಗಳ ಸಾರಥಿ ಎಂದೇ ಪ್ರಸಿದ್ಧಿ ಪಡೆದಿದೆ. ಈ ಬಾರಿ ಈ ಮಂಟಪದಲ್ಲಿ ಸಂಜೀವಿನಿ ಬೆಟ್ಟ ಹೊತ್ತ ಆಂಜನೇಯನ ಕಲಾಕೃತಿ ಕಾಣಸಿಗಲಿದೆ. ಶಕ್ತಿ ದೇವತೆಗಳ ಹಿರಿಯಕ್ಕ ಎಂದು ಖ್ಯಾತಿ ಪಡೆದಿರುವ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ೪೮ನೇ ವರ್ಷದ ಉತ್ಸವ ಆಚರಣೆ ಮಾಡುತ್ತಿದ್ದು, ಮಂಟಪದಲ್ಲಿ ಈಶ್ವರ, ಪಾರ್ವತಿ, ಗಣಪತಿ, ಸುಬ್ರಮಣ್ಯ ಕಲಾಕೃತಿಗಳನ್ನು ಅಳವಡಿಸ ಲಾಗುತ್ತಿದೆ. ಶ್ರೀ ಕೋಟೆ ಮಾರಿಯಮ್ಮ ದಸರಾ ಮಂಟಪ ಸಮಿತಿ ೪೬ನೇ ವರ್ಷದ ಉತ್ಸವ ಆಚರಣೆ ಮಾಡುತ್ತಿದ್ದು ಗಣಪತಿಯಿಂದ ಶತಮಹಿಷಿ ಸಂಹಾರ ಕಥಾ ಸಾರಾಂಶವನ್ನು ಸಣ್ಣ ಪ್ರಮಾಣದ
(ಮೊದಲ ಪುಟದಿಂದ) ಚಲನ ವಲನದೊಂದಿಗೆ ಪ್ರದರ್ಶಿಸಲಿದೆ. ೯೧ನೇ ವರ್ಷದ ಉತ್ಸವ ಆಚರಣೆ ಮಾಡುತ್ತಿರುವ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ದೇವಿಯಿಂದ ಶುಂಭನಿಶುAಭ ಸಂಹಾರವನ್ನು ಸಣ್ಣಮಟ್ಟದ ಚಲನ ವಲನದೊಂದಿಗೆ ತೋರಿಸಲಿದೆ. ೫೮ನೇ ವರ್ಷದ ಉತ್ಸವ ಆಚರಣೆ ಮಾಡುತ್ತಿರುವ ಶ್ರೀ ಕಂಚಿಕಾಮಾಕ್ಷಿ ದೇವಾಲಯ ದಸರಾ ಮಂಟಪ ಸಮಿತಿ ಆಂಜನೇಯನ ರಥದೊಂದಿಗೆ ಬರಲಿದ್ದು, ದೇಚೂರು ಶ್ರೀ ರಾಮಮಂದಿರ ಸಮಿತಿ ೧೦೩ನೇ ವರ್ಷದ ಉತ್ಸವ ಪ್ರಯುಕ್ತ ಹನುಮನಿಂದ ಸುರಸೆಯ ಪರಾಜಯ ಕಥಾ ಸಾರಾಂಶವನ್ನು ಸಣ್ಣ ಪ್ರಮಾಣದ ಚಲನ ವಲನದೊಂದಿಗೆ ಪ್ರಸ್ತುತಪಡಿಸಲಿದೆ. ಶ್ರೀ ಕೋದಂಡ ರಾಮ ದೇವಾಲಯ ಸಮಿತಿ ೪೭ನೇ ವರ್ಷದ ಉತ್ಸವ ಆಚರಣೆ ಪ್ರಯುಕ್ತ ಮಹಿಷಾಸುರ ಮರ್ಧಿನಿ ಕಲಾಕೃತಿಯನ್ನು ಮಂಟಪದಲ್ಲಿ ಅಳವಡಿಸಲಿದೆ. ಚೌಡೇಶ್ವರಿ ದೇವಾಲಯ ಮಂಟಪ ಸಮಿತಿ ೫೯ನೇ ವರ್ಷದ ಉತ್ಸವದ ಪ್ರಯುಕ್ತ ಸಣ್ಣಮಟ್ಟದ ಚಲನ ವಲನದೊಂದಿಗೆ ಮಹಿಷಾಸುರ ಮರ್ಧಿನಿ ಕಥಾ ಸಾರಾಂಶವನ್ನು ಪ್ರದರ್ಶಿಸಲಿದೆ. ಶ್ರೀ ಕೋಟೆ ಗಣಪತಿ ದಸರಾ ಮಂಟಪ ಉತ್ಸವ ಸಮಿತಿ ೪೫ನೇ ವರ್ಷದ ಉತ್ಸವ ಆಚರಣೆ ಪ್ರಯುಕ್ತ ಗಣಪತಿಯಿಂದ ನರಾಂತರ ದೇವಾಂತಕನ ಸಂಹಾರ ಕಥಾ ಸಾರಾಂಶವನ್ನು ಸಣ್ಣ ಪ್ರಮಾಣದ ಚಲನ ವಲನದೊಂದಿಗೆ ತೋರಿಸಲಿದೆ. ಕರವಲೆ ಭಗವತಿ ಮಹಿಷ ಮರ್ಧಿನಿ ದೇವಾಲಯ ದಸರಾ ಮಂಟಪ ಸಮಿತಿ ೨೬ನೇ ವರ್ಷದ ಉತ್ಸವ ಪ್ರಯುಕ್ತ ಈಶ್ವರ ಪಾರ್ವತಿ ಕಲಾಕೃತಿಯನ್ನು ಮಂಟಪದಲ್ಲಿ ಅಳವಡಿಸಲಿದೆ.
ಪೇಟೆ ರಾಮಮಂದಿರ ಮಂಟಪದ ಅಧ್ಯಕ್ಷರಾಗಿ ಪವನ್, ಕೋದಂಡ ರಾಮ ಮಂಟಪದ ಅಧ್ಯಕ್ಷರಾಗಿ ವಿಶ್ವನಾಥ್, ದಂಡಿನ ಮಾರಿಯಮ್ಮ ಸಮಿತಿ ಅಧ್ಯಕ್ಷರಾಗಿ ದಿನೇಶ್ ನಾಯರ್, ಕುಂದುರುಮೊಟ್ಟೆ ಮಂಟಪದ ಅಧ್ಯಕ್ಷರಾಗಿ ಮನುಮಂಜುನಾಥ್, ದೇಚೂರು ರಾಮಮಂದಿರ ಸಮಿತಿ ಅಧ್ಯಕ್ಷರಾಗಿ ವೇಣುಗೋಪಾಲ್, ಕೋಟೆ ಮಾರಿಯಮ್ಮ ಸಮಿತಿ ಅಧ್ಯಕ್ಷರಾಗಿ ವಿ.ಎಸ್. ಗಿರೀಶ್ ಕುಮಾರ್, ಕಂಚಿಕಾಮಾಕ್ಷಿ ಮಂಟಪದ ಅಧ್ಯಕ್ಷರಾಗಿ ಭೌತಮ್ ಸುವರ್ಣ, ಜಿ.ಆರ್. ರಾಘವೇಂದ್ರ, ಕರವಲೆ ಭಗವತಿ ಸಮಿತಿ ಅಧ್ಯಕ್ಷರಾಗಿ ನೀರಜ್ ಬೋಪಣ್ಣ, ಕೋಟೆ ಗಣಪತಿ ಮಂಟಪದ ಅಧ್ಯಕ್ಷರಾಗಿ ಹೆಚ್.ಯು. ಸುಧೀಶ್, ಚೌಡೇಶ್ವರಿ ಮಂಟಪದ ಅಧ್ಯಕ್ಷರಾಗಿ ಹರೀಶ್ ಭೀಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಧ್ವನಿವರ್ಧಕಕ್ಕೆ ನಿರ್ಬಂಧ - ಆಕ್ಷೇಪ
ಇಂದು ದಶಮಂಟಪ ಸಮಿತಿ ಪದಾಧಿಕಾರಿಗಳ ಸಭೆ ನಡೆಸಿದ ನಗರ ವೃತ್ತ ನಿರೀಕ್ಷಕ ವೆಂಕಟೇಶ್ ಅವರು ದಸರಾ ಉತ್ಸವದಂದು ಧ್ವನಿವರ್ಧಕ ಬಳಕೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಆದ್ದರಿಂದ ಮಂಟಪಗಳಲ್ಲಿ ವಾದ್ಯಗೋಷ್ಠಿಯನ್ನು ಮಾತ್ರ ಬಳಸುವಂತೆ ಹೇಳಿದರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ದಶಮಂಟಪ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಈಗಾಗಲೇ ಧ್ವನಿವರ್ಧಕಗಳಿಗೆ ಮುಂಗಡ ಹಣ ನೀಡಲಾಗಿದ್ದು, ಕೊನೆ ಗಳಿಗೆಯಲ್ಲಿ ಧ್ವನಿವರ್ಧಕವನ್ನು ಬಳಸಬಾರದೆಂದು ಸೂಚಿಸುವುದು ಸರಿಯಲ್ಲ. ಮಂಟಪಗಳಲ್ಲಿ ಧ್ವನಿವರ್ಧಕವನ್ನು ಬಳಸಲು ಅವಕಾಶ ನೀಡಲೇಬೇಕೆಂದು ಆಗ್ರಹಿಸಿದರು. ಅಲ್ಲದೇ ಈ ಬಗ್ಗೆ ತಾ. ೧೩ರಂದು (ಇಂದು) ದಶಮಂಟಪ ಸಮಿತಿ ಸಭೆ ನಡೆಸಿ ತೀರ್ಮಾನಿಸಲಾಗುವುದೆಂದು ಹೇಳಿದರು.
ಸಿಐ ವೆಂಕಟೇಶ್ ಮಾತನಾಡಿ ಜಿಲ್ಲಾಡಳಿತದ ಆದೇಶವನ್ನು ಪಾಲಿಸಲೇಬೇಕಾಗಿದೆ. ಧ್ವನಿವರ್ಧಕ ಬಳಕೆ ಸಂಬAಧ ಸಮಿತಿಯವರು ಮೇಲಧಿಕಾರಿಗಳಿಂದ ಆದೇಶ ಮಾಡಿಸಿದರೆ ನಾವು ಸಹಕಾರ ನೀಡಲು ಸಿದ್ಧ ಎಂದು ಹೇಳಿದರು.
- ಉಜ್ವಲ್ ರಂಜಿತ್