ಭಾಗಮಂಡಲ, ಅ. ೧೨: ಚೇರಂಬಾಣೆಯಲ್ಲಿ ಬಿ.ಜೆ.ಪಿ. ಯುವ ಮೋರ್ಚಾದ ವತಿಯಿಂದ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಯಿತು. ಚೇರಂಬಾಣೆ ಅರುಣಾ ಜೂನಿಯರ್ ಕಾಲೇಜು ಬಳಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಬೇಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ. ಯಶೋಧ ಅವರು ಚಾಲನೆ ನೀಡಿದರು.
ಚೇರಂಬಾಣೆಯ ಮುಖ್ಯ ರಸ್ತೆಯಿಂದ ಕೊಟ್ಟೂರು ಗೋಪಾಲಕೃಷ್ಣ ದೇವಸ್ಥಾನದ ಕಮಾನು ತನಕ ಸ್ವಚ್ಛತಾ ಕಾರ್ಯ ನಡೆಯಿತು. ನಂತರ ಚೇರಂಬಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ಬೆಳೆದಿದ್ದ ಕಾಡನ್ನು ಕಡಿದು ಶುಚಿಗೊಳಿಸಲಾಯಿತು. ಈ ಸಂದರ್ಭ ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ ಬೋಡಂಡ ಸೋಮಯ್ಯ, ಕಾರ್ಯದರ್ಶಿ ಪ್ರಜ್ವಲ್, ಶಕ್ತಿ ಕೇಂದ್ರ ಪ್ರಮುಖ್ ಬಾಚರಣಿಯಂಡ ಸುಮನ್, ಸಹಾ ಪ್ರಮುಖ್ ಕೂರನ ಮೋಹನ್, ಬೇಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ, ಉಪಾಧ್ಯಕ್ಷೆ ತಟ್ಟಂಡ ಸ್ವಾತಿ, ಗ್ರಾಮ ಪಂಚಾಯಿತಿ ಸದ್ಯಸರಾದ ತೇಲಪಂಡ ಸತ್ಯ ಸುಬ್ಬಯ್ಯ, ಬಡ್ಡಿರ ಸೋಮಣ್ಣ ಮುಂತಾದವರು ಭಾಗವಹಿಸಿ ಸ್ವಚ್ಛತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಸ್ವಚ್ಛತಾ ಕಾರ್ಯಕ್ರಮಕ್ಕೆ ಬೇಂಗೂರು ಗ್ರಾಮ ಪಂಚಾಯಿತಿ ವತಿಯಿಂದ ಗೂಡ್ಸ್ ಆಟೋವನ್ನು ನೀಡಲಾಯಿತು.