ಮಡಿಕೇರಿ, ಅ. ೧೨: ಕೊಡಗಿನ ಜೀವಂತ ಸಮಸ್ಯೆಗಳಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ದÀನಿಯಾಗಿ, ಆಡಳಿತ ಪಕ್ಷವನ್ನು ಎಚ್ಚರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಕರೆ ನೀಡಿದರು.
ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಇಂದು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ಗೌಡ ಅವರ ಪದಗ್ರಹಣ ಕಾರ್ಯಕ್ರಮದಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ನಾಯಕರ ವಿಶ್ವಾಸ ಪಡೆದುಕೊಂಡು ಬೂತ್ ಮಟ್ಟದಿಂದ ಸಂಘಟನೆ ಮಾಡುವ ಜವಾಬ್ದಾರಿ ನಿಮಗಿದೆ. ಯುವಕರಿಗೆ ಶಕ್ತಿ ತುಂಬಿಸುವ ಸಲುವಾಗಿ ನಾನು ಬಂದಿದ್ದೇನೆ. ಯುವಕರು ಈ ದೇಶದ ಆಸ್ತಿ. ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಲು ಯುವಜನಾಂಗ ಕಾರಣವಾಗಿದೆ. ಕಾಂಗ್ರೆಸ್ ಪಕ್ಷಕ್ಕೂ ಯುವಕರು ಆಸ್ತಿ. ಯುವಕರು ಹೋರಾಟದ ಭಾವನೆ, ಸಮಸ್ಯೆ ಅರಿತು ಜನಸೇವೆ ಮಾಡಬೇಕು. ಇದರಿಂದ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ. ಯೋಧರ ನಾಡು ಕೊಡಗನ್ನು ಕಾಯುವ ಜವಾಬ್ದಾರಿ ಪಕ್ಷದ ಮೇಲಿದೆ. ಬೂತ್, ಪಟ್ಟಣ, ಗ್ರಾಮ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಯುವಪಡೆ ಕಟ್ಟುವ ನಿಟ್ಟಿನಲ್ಲಿ ಶ್ರಮವಹಿಸಬೇಕು. ಬಿನ್ನಾಭಿಪ್ರಾಯ ಬದಿಗೊತ್ತಿ ಪಕ್ಷ ಸಂಘಟನೆಗೆ ಒತ್ತು ನೀಡಿ. ಕಸ್ತೂರಿ ರಂಗನ್ ವರದಿ ವಿರುದ್ಧ ಮಾತನಾಡುತ್ತಿದ್ದ ಬಿಜೆಪಿ ಇಂದು ಮೌನವಹಿಸಿದೆ. ಪಕ್ಷ ಸದೃಢವಾಗಿ ಬೆಳೆಯಬೇಕಾದರೆ ಒಂದಾಗಬೇಕು ಎಂದು ಸಲಹೆ ನೀಡಿದರು.
ಗೋಸುಂಬೆ ರೀತಿ ಮೋದಿ ಆಡಳಿತ ಬದಲಾಗುತ್ತಿರುತ್ತದೆ. ರೈತರಿಗೆ, ಮಹಿಳೆಯರಿಗೆ, ಬಡವರಿಗೆ ಪ್ರಯೋಜನವಾಗುವ ಕಾರ್ಯಕ್ರಮ ಗಳನ್ನು ರೂಪಿಸಿಲ್ಲ. ಕೋವಿಡ್ನಿಂದ ನೊಂದ ಕುಟುಂಬಕ್ಕೆ, ಕಾಫಿ ಬೆಳೆಗಾರರಿಗೆ ಕೇಂದ್ರ ಸರಕಾರ ಏನು ಮಾಡಿದೆ. ಈ ಬಗ್ಗೆ ಕೊಡಗಿನ ಶಾಸಕರು ಕೂಡ ಏನೂ ಮಾತ ನಾಡಿಲ್ಲ. ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದ ಅವರು, ಬೆಳೆ ನಾಶದಿಂದ ರೈತರು ನಷ್ಟಕ್ಕೆ ತುತ್ತಾಗಿದ್ದರೂ ಪರಿಹಾರ ನೀಡಿಲ್ಲ. ಕೇಂದ್ರ ಹಾಗೂ ರಾಜ್ಯ ಈ ಧೋರಣೆ ಬಗ್ಗೆ ಮನೆಮನೆಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರು ಮಾಡಬೇಕು. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಹಾಗೂ ಆರ್.ಎಸ್.ಎಸ್. ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ಮುಸ್ಲಿಂ ಪರ ಎಂದು ಬಿಜೆಪಿ ಟೀಕೆ ಮಾಡುತ್ತವೆ. ನಾವು ಜಾತ್ಯತೀತರು ಎಂದು ಸಮರ್ಥಿಸಿಕೊಂಡರು.
೨ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತಿವೆ ಎಂಬ ಭರವಸೆ ಇಂದಿಗೂ ಭರವಸೆಯಾಗಿಯೇ ಉಳಿದುಕೊಂಡಿದೆ. ಬ್ಯಾಂಕ್, ಏರ್ಪೋರ್ಟ್, ಬಂದರು, ವಿಮೆ ಕಂಪನಿ ಗಳನ್ನು ಮಾರಾಟ ಮಾಡಲು ಕೇಂದ್ರ ಹೊರಟಿದೆ. ಆತ್ಮನಿರ್ಭರ್ ಮೂಲಕ ೨೨ ಲಕ್ಷ ಕೋಟಿ ಹಣದಲ್ಲಿ ಕೊಡಗಿಗೆ ಎಷ್ಟು ಬಂತು ಎಂದು ಡಿ.ಕೆ.ಸುರೇಶ್ ಪ್ರಶ್ನಿಸಿದರು.
(ಮೊದಲ ಪುಟದಿಂದ)
ಕಾರ್ಯಾಧ್ಯಕ್ಷರಿAದ ಕರೆ
ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಧ್ರುವನಾರಾಯಣ, ಮಿಥುನ್ ಮತ್ತು ತಂಡಕ್ಕೆ ಮಹತ್ತರ ಜವಾಬ್ದಾರಿ ಇದೆ. ಕೊಡಗು ಒಂದು ಕಾಲದಲ್ಲಿ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಅಂದಿನ ಮೂರು ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಶಾಸಕರಿದ್ದರು. ೨೦೦೪ರ ನಂತರ ಕಾಂಗ್ರೆಸ್ ಅಧಿಕಾರ ವಂಚಿತವಾಗಿದೆ. ಪಕ್ಷ ಸಂಘಟನೆ ದೊಡ್ಡ ಜವಾಬ್ದಾರಿಯಾಗಿದೆ. ಕಾಂಗ್ರೆಸ್ನ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸಬೇಕು. ಸಂಜಯ್ ಗಾಂಧಿ ಯುವಕಾಂಗ್ರೆಸ್ ನೇತೃತ್ವ ವಹಿಸಿದ ಬಳಿಕ ಪರಿಣಾಮಕಾರಿಯಾಗಿ ಸಂಘಟನೆ ಹೊರಹೊಮ್ಮಿತು. ೫ ಅಂಶದ ಕಾರ್ಯಕ್ರಮ ಯಶಸ್ವಿಯಾಯಿತು. ಆ ಚಿಂತನೆಗಳು ಮತ್ತೆ ಅನುಷ್ಠಾನವಾಗಬೇಕು. ಯುವಕಾಂಗ್ರೆಸ್ ಮೂಲಕ ಪಕ್ಷಕ್ಕೆ ಮತ್ತಷ್ಟು ಸ್ಥೆöÊರ್ಯ ತುಂಬಬೇಕು. ಕರ್ನಾಟಕದ ಸಾಮಾನ್ಯ ಯುವಕ ಶ್ರೀನಿವಾಸ್ ರಾಷ್ಟಾçಧ್ಯಕ್ಷರಾಗಿದ್ದಾರೆ. ರೈತರ ಹೋರಾಟಕ್ಕೆ ಯುವಕಾಂಗ್ರೆಸ್, ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಯುವಕರು ಕೆಲಸ ಮಾಡಿದ್ದಾರೆ. ದೇಶದಲ್ಲಿ ಯುಪಿಎ ಅವಧಿಯಲ್ಲಿ ೧೫% ನಿರುದ್ಯೋಗ ಇತ್ತು. ಇದೀಗ ೨೯% ಇದೆ. ಮೋದಿ ಸರಕಾರ ಬಂದ ನಂತರ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು. ಕೊಡಗಿನಲ್ಲಿ ಪ್ರವಾಹ ಸಂದರ್ಭ ರಕ್ಷಣೆ, ಸಹಾಯಹಸ್ತ ನೀಡುವ ನಿಟ್ಟಿನಲ್ಲಿ ಕಾರ್ಯಪಡೆ ರಚಿಸಿ ಕೆಲಸ ಮಾಡಬೇಕು. ತಜ್ಞರನ್ನು ಕರೆಸಿ ವಿವಿಧ ಬೆಳವಣಿಗೆ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿಚಾರ ಸಂಕಿರ ನಡೆಸಬೇಕು. ಕೇವಲ ಪ್ರತಿಭಟನೆಗೆ ಸೀಮಿತವಾಗದೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಮೂಲಕ ಸಂಘಟನೆಗೆ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತನ್ನಾಡಿದರು.
ಪ್ರಮುಖರ ಅನಿಸಿಕೆ
ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಮಾತನಾಡಿ, ಹೋರಾಟದ ಕಿಚ್ಚಿನಲ್ಲಿ ಯುವಕಾಂಗ್ರೆಸ್ ಅನ್ನು ಬೆಳೆಸಬೇಕು. ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಉತ್ತರಪ್ರದೇಶದ ಲಕ್ಷಿö್ಮÃಪುರದಲ್ಲಿ ನಡೆದ ಘಟನೆ ಖಂಡಿಸುತ್ತಿರುವ ಕಾಂಗ್ರೆಸ್ ನಾಯಕರ ಹೋರಾಟವನ್ನು ಹತ್ತಿಕ್ಕುವ ಕೆಲಸವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದ ಅವರು, ಸ್ಥಳೀಯ ಸಮಸ್ಯೆಗಳ ವಿರುದ್ಧ ಹೋರಾಡಬೇಕು. ತನಿಖಾ ಸಂಸ್ಥೆಗಳು ಸರಕಾರದ ಹಿಡಿತದಲ್ಲಿವೆ. ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮೂಲಕ ಹೆದರಿಸುವ ಪ್ರಯತ್ನವಾಗುತ್ತಿದೆ. ಕಾನೂನಿನ ದುರುಪಯೋಗ ಮಾಡಿ ನಮ್ಮ ವಿರುದ್ಧ ಸುಳ್ಳು ದೂರು ದಾಖಲು ಮಾಡಲಾಗುತ್ತಿದೆ. ಯುವಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇರಬಾರದು. ಸ್ನೇಹಜೀವಿಯಾಗಿರಬೇಕು. ಒಂದಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಮತದಾರರನ್ನು ಒಗ್ಗೂಡಿಸಬಹುದು ಎಂದು ತಿಳಿಸಿದರು.
ಹಿರಿಯ ಮುಖಂಡ ಚಂದ್ರಮೌಳಿ ಮಾತನಾಡಿ, ನಾವೆಲ್ಲರೂ ಸೇರಿ ಸುಂದರ ಸಮಾಜ ನಿರ್ಮಾಣ ಮಾಡಬೇಕು. ಲಕ್ಷಿö್ಮÃಪುರ ಘಟನೆಯ ಚಿತ್ರಣ ಬದಲಿಸಿದ್ದು ಪ್ರಿಯಾಂಕ ಹಾಗೂ ರಾಹುಲ್ ಗಾಂಧಿ. ಮಡಿಕೇರಿ ಶಾಸಕ ಕಾಂಗ್ರೆಸ್ ಮುಕ್ತ ಎಂದು ಹೇಳಿಕೆ ನೀಡಿದ್ದರು. ವಿವಿಧ ಆಮಿಷವೊಡ್ಡಿ ಹಿನ್ನಡೆ ಸಾಧಿಸಿರುವುದು ಸತ್ಯ. ನಗರಸಭೆ ಕಾಂಗ್ರೆಸ್ ಮುಕ್ತ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತವಾಗುತ್ತದೆ. ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆಯುತ್ತಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಸ್ಪಂದನ ನೀಡಿದ್ದಾರೆ ಎಂದರು.
ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ದೇಶ ಚಿಂತಾಜನಕ ಸ್ಥಿತಿಯಲ್ಲಿದೆ. ಜನರು ಆತಂಕದಲ್ಲಿದ್ದಾರೆ. ೭ ವರ್ಷದಿಂದ ದೇಶದ ಪರಿಸ್ಥಿತಿ ಅಧೋಗತಿಗೆ ಸಾಗುತ್ತಿದೆ. ಜಿಡಿಪಿ ಕುಸಿದಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ ಪ್ರಜಾಪ್ರಭುತ್ವ ಮೌಲ್ಯ ದೇಶದಲ್ಲಿ ಕ್ಷೀಣಿಸುತ್ತಿದೆ. ಚುನಾಯಿತರ ನಿರಂಕುಶ ಪ್ರಭುತ್ವ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯವಾಗಿ ತನಿಖಾ ಸಂಸ್ಥೆಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ. ಬಿಜೆಪಿ ವಿರುದ್ಧ ಧ್ವನಿ ಎತ್ತುವವರನ್ನು ಬಂಧಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ರಕ್ಷಣೆ ನಮ್ಮ ಹೊಣೆಯಾಗಿದೆ. ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಭ್ರಷ್ಟಾಚಾರ ಮಾಡಿದೆ. ಲಸಿಕೆ ವಿಳಂಬವಾಗಿ ನೀಡಿದ ಪರಿಣಾಮ ಸಾವು-ನೋವುಗಳು ಸಂಭವಿಸಿವೆ. ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಉತ್ತಮ ಆಡಳಿತ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಯತೀಂದ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷ ರಾಮಯ್ಯ ಮಾತನಾಡಿ, ಕೊಡಗಿನ ಅರಣ್ಯ ಉಳಿವಿಗೆ ಇಂದಿರಾ ಗಾಂಧಿ ಕಾರಣ. ವಿಶೇಷ ಯೋಜನೆ ಅರಣ್ಯ ಸಂಪತ್ತು ಉಳಿಸಿದ್ದಾರೆ. ಭಾರತದ ಗಡಿಯಲ್ಲಿ ಉದ್ವಿಗ್ನತೆ, ಸೈನಿಕರ ಮೇಲೆ ದಾಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಮೋದಿ, ಅಮಿತ್ ಷಾ ಮೌನವಹಿಸಿದ್ದಾರೆ. ಸೈನಿಕರ ಸಾಹಸವನ್ನು ಮೋದಿ ರಾಜಕೀಯವಾಗಿ ಬಳಸಿಕೊಂಡು ಭಾವನಾತ್ಮಕವಾಗಿ ಸೆಳೆಯುತ್ತಿದ್ದಾರೆ ಎಂದರು.
ಪುನಶ್ಚೇತನ ನಿರೀಕ್ಷೆ
ಕೊಡಗು ಕಾಂಗ್ರೆಸ್ ಕಾರ್ಯಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಪುನಶ್ಚೇತನವಾಗುವ ವಾತಾವರಣ ಇದೆ. ಗುಂಪುಗಾರಿಕೆ ಕಡಿಮೆಯಾಗಿದೆ. ಯುವಕಾಂಗ್ರೆಸ್ ಸ್ಪೂರ್ತಿ ತುಂಬಿದೆ ಎಂದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ ಅಧಿಕಾರ ಸ್ವೀಕರಿಸಿ ಮಾತನಾಡಿ, ಎಲ್ಲರ ವಿಶ್ವಾಸ, ನಂಬಿಕೆ, ನಿರೀಕ್ಷೆ ಹುಸಿ ಮಾಡದೆ ಪಕ್ಷಕ್ಕೆ ಪೂರಕ ಸಹಕಾರ ನೀಡುತ್ತೇವೆ. ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೆರವಣಿಗೆ
ಸಭಾಕಾರ್ಯಕ್ರಮಕ್ಕೂ ಮುನ್ನ ಫೀ.ಮಾ.ಕಾರ್ಯಪ್ಪ ವೃತ್ತದಲ್ಲಿರುವ ಫೀ.ಮಾ. ಕಾರ್ಯಪ್ಪ ಹಾಗೂ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆಗೆ ಕಾಂಗ್ರೆಸ್ ನಾಯಕರು ಮಾಲಾರ್ಪಣೆಗೈದರು. ನಂತರ ಮೆರವಣಿಗೆ ಮೂಲಕ ಕ್ರಿಸ್ಟಲ್ ಕೋರ್ಟ್ ಸಭಾಂಗಣದ ತನಕ ಕಾರ್ಯಕರ್ತರ ಸಹಿತ ನಾಯಕರು ಆಗಮಿಸಿದರು. ಈ ಸಂದರ್ಭ ಬಿಜೆಪಿ ಪಕ್ಷ ತೊರೆದು ಹಲವು ಯುವಕರು ಕಾಂಗ್ರೆಸ್ ಸೇರ್ಪಡೆಯಾದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕೆಪಿಸಿಸಿ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಕಾಂಗ್ರೆಸ್ ಮುಖಂಡರಾದ ಚಂದ್ರಮೌಳಿ, ಟಿ.ಪಿ.ರಮೇಶ್, ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷರಾದ ಕೆಂಪರಾಜು ಗೌಡ, ಭವ್ಯ, ಕೊಡಗು ಉಸ್ತುವಾರಿ ವಿವೇಕ್, ರಾಜ್ಯ ಕಾರ್ಯದರ್ಶಿ ರಿಯಾ, ಪ್ರದೀಪ್, ಕೊಡಗು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.