ಮಕ್ಕಳಿಗಾಗಿ ಕೊರೊನಾ ಲಸಿಕೆಗೆ ಸಮ್ಮತಿ
ನವದೆಹಲಿ, ಅ. ೧೨: ಕೊರೊನಾ ಸಾಂಕ್ರಾಮಿಕ ಆರಂಭವಾದಾಗಿನಿAದ ಕಾಡುತ್ತಿದ್ದ ಬಹುದೊಡ್ಡ ಪ್ರಶ್ನೆಗೆ ಕೊನೆಗೂ ಇಂದು ಉತ್ತರ ಲಭಿಸಿದ್ದು, ಮಕ್ಕಳಿಗೆ ನೀಡುವ ಕೋವಿಡ್ ಲಸಿಕೆ ಕುರಿತು ವಿಷಯ ತಜ್ಞರ ಸಮಿತಿ (ಎನ್‌ಇಸಿಸಿ) ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ನೂತನ ಶಿಫಾರಸ್ಸು ಮಾಡಿದೆ. ಕೊರೊನಾ ಸಾಂಕ್ರಾಮಿಕ ಆರಂಭವಾದಾಗಿನಿAದ ಇಲ್ಲಿಯವರೆಗೂ ಮಕ್ಕಳಿಗೆ ಕೊರೊನಾ ಲಸಿಕೆ ಬಂದಿರಲಿಲ್ಲ. ಇದು ಬಹುತೇಕ ಎಲ್ಲಾ ಪೋಷಕರ ತಲೆನೋವಿಗೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಬಹುತೇಕ ಎಲ್ಲಾ ಔಷಧ ತಯಾರಿಕಾ ಸಂಸ್ಥೆಗಳು ಹಾಗೂ ಸ್ವತಃ ಕೇಂದ್ರ ಸರ್ಕಾರ ಸಾಕಷ್ಟು ತಲೆಕೆಡಿಸಿಕೊಂಡಿತ್ತು. ಅಲ್ಲದೆ ಮಕ್ಕಳ ಲಸಿಕೆಗಾಗಿ ಸತತ ಅಧ್ಯಯನ ನಡೆಸಿತ್ತು. ಇದೀಗ ಕೊನೆಗೂ ಈ ಸತತ ಪ್ರಯತ್ನಕ್ಕೆ ಫಲ ಲಭಿಸುವ ಕಾಲ ಸನ್ನಿಹಿತವಾಗಿದ್ದು, ೨-೧೮ ವರ್ಷದೊಳಗಿನ ಮಕ್ಕಳಿಗೆ ತುರ್ತು ಬಳಕೆಗಾಗಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡುವಂತೆ ಎಸ್‌ಇಸಿ ಸಂಸ್ಥೆ ಡಿಸಿಜಿಐಗೆ ಶಿಫಾರಸ್ಸು ಮಾಡಿದೆ. ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೆ ನೀಡುವ ಕುರಿತು ವಿಷಯ ತಜ್ಞರ ಸಮಿತಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸ್ಸು ಮಾಡಿದೆ. ಅತ್ತ ತಜ್ಞರ ಸಮಿತಿಯ ಶಿಫಾರಸ್ಸಿಗೆ ಮನ್ನಣೆ ನೀಡಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ೨-೧೮ ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಲು ಅನುಮೋದನೆ ನೀಡಿದೆ.
ಅರ್ಚಕರು-ದೇವಾಲಯ ನೌಕರರಿಗೆ ಕೊಡುಗೆ
ಬೆಂಗಳೂರು, ಅ. ೧೨: ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಜರಾಯಿ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು, ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ ೬ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು. ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಹಾಗೂ ದೇವಾಲಯ ಸಿಬ್ಬಂದಿ ಆರೋಗ್ಯ ಸಮಸ್ಯೆಗೆ ಒಳಗಾದರೆ ಅವರಿಗೆ ರಕ್ಷಣೆ ಒದಗಿಸಲು ನಾನು ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ಮೇಲೆ ವಿನೂತನ ವಿಮೆ ಯೋಜನೆ ಜಾರಿಗೊಳಿಸಿದ್ದು, ಅರ್ಚಕರು ಹಾಗೂ ಇಲಾಖೆ ನೌಕರರಿಗೆ ವಿಮೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ಮುಜರಾಯಿ ಇಲಾಖೆಯ ಸುಮಾರು ೩೭,೦೦೦ ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಮುಜರಾಯಿ ಇಲಾಖೆಯ ಎ ಮತ್ತು ಬಿ ಶ್ರೇಣಿಯ ಸಿಬ್ಬಂದಿಗೆ ಆರನೇ ವೇತನ ಆಯೋಗದ ಶ್ರೇಣಿ ಜಾರಿಗೊಳಿಸಲಾಗಿದೆ. ಮುಜರಾಯಿ ಇಲಾಖೆಯ ಎ ಮತ್ತು ಬಿ ಅಧಿಸೂಚಿತ ಧಾರ್ಮಿಕ ಸಂಸ್ಥೆಗಳಲ್ಲಿ ಈಗಾಗಲೇ ೫ನೇ ವೇತನ ಶ್ರೇಣಿ ಸೌಲಭ್ಯ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ೬ನೇ ವೇತನ ಆಯೋಗ ಶ್ರೇಣಿ ಜಾರಿಯಾಗಿರಲಿಲ್ಲ. ೬ನೇ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕೆಂಬುದು ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಈಗ ಅದನ್ನು ಈಡೇರಿಸಲಾಗಿದೆ ಎಂದರು.
ಸೈಟ್ ಕೊಡಿಸುವುದಾಗಿ ವಂಚನೆ: ಮಾಜಿ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್‌ಐಆರ್
ಬೆಂಗಳೂರು, ಅ. ೧೨: ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಸರ್ಕಾರ ರಚಿಸಿದಾಗ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ವಿರುದ್ಧ ವಂಚನೆ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿದೆ. ಸೈಟ್ ಕೊಡಿಸುವುದಾಗಿ ಹಣ ಪಡೆದು, ವಂಚಿಸಿದ್ದಾರೆAದು ಕಟ್ಟಾ ವಿರುದ್ಧ ಆರೋಪಿಸಲಾಗಿದ್ದು, ೨೦೦೪ರಲ್ಲಿ ಶಾಸಕರಾಗಿದ್ದಂತ ಸಂದರ್ಭದಲ್ಲಿ ವಂಚಿಸಿರುವ ಆರೋಪವಿದಾಗಿದೆ. ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಇಂಡ್ ಸಿಂಡ್ ಎಂಬ ಕಂಪೆನಿಯಿAದ ಸೈಟ್ ಕೊಡಿಸುವುದಾಗಿ ೨.೮೫ ಕೋಟಿ ಹಣ ಪಡೆದಿದ್ದರು. ನಗದು ಹಾಗೂ ಚೆಕ್ ಮೂಲಕ ೨.೮೫ ಕೋಟಿ ಹಣ ಪಡೆದಿದ್ದರು. ಈ ಬಗ್ಗೆ ಹಲವು ಬಾರಿ ವಿಚಾರಿಸಿದರೂ ಅವರು ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ ಎಂದು ದೂರಲಾಗಿದೆ. ಈ ಹಿನ್ನೆಲೆ ಇಂಡ್ ಸಿಂಡ್ ಡೆಲವಪರ್ಸ್ ಪ್ರೆöÊವೇಟ್ ಲಿಮಿಟೆಡ್‌ನ ನಿರ್ದೇಶಕರು ಕೋರ್ಟ್ ಮೊರೆ ಹೋಗಿದ್ದು, ಸೈಟ್ ಮತ್ತು ಫ್ಲಾಟ್ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ೪ನೇ ಎಸಿಎಂಎA ಕೋರ್ಟ್ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆ ಇದೀಗ ಎಫ್‌ಐಆರ್ ದಾಖಲಾಗಿದೆ. ನಗರದ ಹೈಗ್ರೌಂಡ್ ಪೊಲೀಸ್ ಠಾಣೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.