ಮಡಿಕೇರಿ, ಅ. ೧೨: ಜಾರ್ಖಂಡ್ನಲ್ಲಿ ಅ.೨೦ರಿಂದ ನಡೆಯಲಿರುವ ಬಾಲಕಿಯರ ಜ್ಯೂನಿಯರ್ ನ್ಯಾಷನಲ್ಸ್ ಹಾಕಿ ಪಂದ್ಯಾವಳಿಯಲ್ಲಿ ಕೊಡಗಿನ ಎಂಟು ವಿದ್ಯಾರ್ಥಿನಿಯರು ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಪಾಂಡAಡ ದೇಚಮ್ಮ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಬಾದುಮಂಡ ಶಯ ಕಾವೇರಮ್ಮ, ದ್ವೀತಿಯ ಬಿ.ಎ ಪೊನ್ನಿಮಾಡ ಶಿಲ್ಪ, ತೃತೀಯ ಬಿಕಾಂ ಕೆಚೇಟ್ಟಿರ ಪಾರ್ವತಿ, ತೃತೀಯ ಬಿ.ಎ ಎಸ್ ಪಿ ಲಿಖಿತಾ, ದ್ವಿತೀಯ ಬಿ.ಎ ಹೆಚ್.ಪಿ ಧನುಶ್ರೀ, ದ್ವಿತೀಯ ಬಿ.ಕಾಂ ಹೆಚ್.ಪಿ ಸಿಂಚನ, ಬಿ.ಕೆ ಲೀಲಾವತಿ ರಾಜ್ಯ ಜ್ಯೂನಿಯರ್ ಹಾಕಿ ತಂಡಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರಾಗಿದ್ದು, ಇವರೆಲ್ಲರೂ ಸಾಯಿ ಕ್ರೀಡಾ ವಸತಿ
(ಮೊದಲ ಪುಟದಿಂದ) ನಿಲಯದಲ್ಲಿ ತರಬೇತಿ ಪಡೆದಿದ್ದು, ಈ ಹಿಂದೆ ಹತ್ತಕ್ಕೂ ಹೆಚ್ಚಿನ ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡಾಕೂಟಗಳಲ್ಲಿ, ಭಾರತದ ಹಲವೆಡೆ ಆಡಿ ಅನುಭವ ಹೊಂದಿರುತ್ತಾರೆ. ಇದೀಗ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಾಸ್ತವ್ಯ ಹೂಡಿ ಪಂದ್ಯಾವಳಿಗೆ ಸಿದ್ಧತೆಯಲ್ಲಿದ್ದು, ಹಾಕಿ ತವರೂರು ಕೊಡಗಿನಿಂದ ಎಂಟು ಮಂದಿ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು ಜಿಲ್ಲಾ ಕ್ರೀಡಾ ಪ್ರೇಮಿಗಳಿಗೆ ಹೆಮ್ಮೆಯ ವಿಷಯವಾಗಿದೆ.