*ಗೋಣಿಕೊಪ್ಪ, ಅ. ೧೨: ರಾಫ್‌ಲ್ಸ್ ಇಂಟರ್‌ನ್ಯಾಷನಲ್ ಪದವಿಪೂರ್ವ ಕಾಲೇಜಿನ ೨೦೨೧-೨೨ನೇ ಸಾಲಿನ ವಿದ್ಯಾರ್ಥಿ ಸಂಘದ ನಾಯಕನಾಗಿ ಮೊಹಮ್ಮದ್ ಇರ್ಫಾನ್ ಹಾಗೂ ಕಾರ್ಯದರ್ಶಿಯಾಗಿ ಮೊಹಮದ್ ಆನರ್, ಫಿಜಾ ಫಾತಿಮಾ ಎಂ.ಹೆಚ್. ಆಯ್ಕೆಯಾಗಿದ್ದಾರೆ.

ಮಡಿಕೇರಿ ತಾಲೂಕಿನ ಹೊದವಾಡ ಗ್ರಾಮದ ರಾಫ್‌ಲ್ಸ್ ಇಂಟರ್‌ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಪದಾಧಿಕಾರಿಗಳ ಆಯ್ಕೆ ಚುನಾವಣೆಯ ಮೂಲಕ ನಡೆಯಿತು. ಸಹ ಕಾರ್ಯದರ್ಶಿಯಾಗಿ ದೇಚಮ್ಮ ಬಿ.ಬಿ., ಕ್ರೀಡಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಆನರ್, ಸಹ ಕ್ರೀಡಾ ಕಾರ್ಯದರ್ಶಿಯಾಗಿ ಸುಜಯ್ ಎ.ಎಂ. ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಅಫೀನಾ ಪಿ.ಹೆಚ್., ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುಸೈಬಾ ಬೀಬಿ ಪಿ.ಎಂ. ಆಯ್ಕೆ ಯಾಗಿದ್ದಾರೆ. ಮತದಾನ ಪ್ರಕ್ರಿಯೆಯು ಉಪನ್ಯಾಸಕಿಯರಾದ ರೇಖಾ, ಅಕ್ಷತೆ, ಕಾವ್ಯ, ರೇಖಾ ಕೆ.ಯು., ಪೂಜಶ್ರೀ, ಸಮೀರಾ ಇವರುಗಳ ಮೇಲ್ವಿಚಾರಣೆಯಲ್ಲಿ ನಡೆಯಿತು ಎಂದು ಕಾಲೇಜಿನ ಪ್ರಾಂಶುಪಾಲ ತನ್ವಿರ್ ಮಾಹಿತಿ ನೀಡಿದ್ದಾರೆ.