ಸೋಮವಾರಪೇಟೆ, ಅ. ೧೨: ಪಟ್ಟಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ತಕ್ಷಣ ಸರಿಪಡಿಸುವಂತೆ ತಾ.ಪಂ. ನಾಮ ನಿರ್ದೇಶನ ಸದಸ್ಯರು ತಾಲೂಕು ಕೆಡಿಪಿ ಸಭೆಯಲ್ಲಿ ಗಮನ ಸೆಳೆದರು.
ತಾಲೂಕು ಪಂಚಾಯಿತಿ ಕೆ.ಡಿ.ಪಿ ಸಭೆ ಆಡಳಿತಾಧಿಕಾರಿ ರಾಜ ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಮಾತನಾಡಿ, ೬ ಮಂದಿಯನ್ನು ಸರ್ಕಾರ ನಾಮನಿರ್ದೆಶನ ಮಾಡಿದೆ. ಚುನಾವಣೆ ನಡೆದು ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವ ತನಕ, ಇವರು ಜನಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ನೀರು ಶುದ್ಧೀಕರಣ ಘಟಕದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವು ದರಿಂದ ಹೊಳೆಯ ನೀರನ್ನು ನೇರವಾಗಿ ಸರಬರಾಜು ಮಾಡಲಾ ಗುತ್ತಿದೆ. ಇದರಿಂದ ಕೆಲ ದಿನಗಳಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ನಾಮ ನಿರ್ದೇಶನ ಸದಸ್ಯ ಮನುಕುಮಾರ್ ರೈ ಸಭೆಯ ಗಮನಕ್ಕೆ ತಂದರು. ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮೂರು ಶುದ್ಧೀಕರಣ ಘಟಕಗಳ ದುರಸ್ತಿ ಕಾರ್ಯ ನಡೆಯುತ್ತಿ ರುವುದರಿಂದ ಸದ್ಯಕ್ಕೆ ಸಮಸ್ಯೆ ಯಾಗಿದೆ. ಕಾಮಗಾರಿ ಮುಗಿದ ನಂತರ ಶುದ್ಧ ನೀರು ಸರಬರಾಜು ಮಾಡಲಾಗುವುದು ಎಂದು ಪಂಚಾಯಿತಿ ಅಧಿಕಾರಿ ಸಭೆಗೆ ತಿಳಿಸಿದರು. ಒಂದರ ನಂತರ ಮತ್ತೊಂದು ಶುದ್ಧೀಕರಣ ಘಟಕದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಇದೀಗ ನೀರಿಗೆ ಸಮಸ್ಯೆಯಾಗಿದ್ದು, ತಕ್ಷಣ ದುರಸ್ತಿ ಕೆಲಸವನ್ನು ಮುಗಿಸುವಂತೆ ಕಿಬ್ಬೆಟ್ಟ ಮಧು ಸಲಹೆ ನೀಡಿದರು.
ಬಾಣಾವರ, ಕುಶಾಲನಗರ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಹೇಳು ವವರು ಕೇಳುವವರು ಇಲ್ಲ ದಂತಾಗಿದೆ. ಇಂಜಿನಿಯರ್ ಕೂಡ ಸ್ಥಳದಲ್ಲಿ ಇದ್ದು ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳುತ್ತಿಲ್ಲ ಎಂದು ಪಿ.ಎನ್. ಗಂಗಾಧರ್ ದೂರಿದರು. ಸಭೆಯಲ್ಲಿ ಸದಸ್ಯರಾದ ಹೆಚ್.ಜಿ. ಜಗನ್ನಾಥ್, ಜಲಜಾ ಶೇಖರ್, ಬಿಜು ಜೋಸೆಫ್ ಉಪಸ್ಥಿತ ರಿದ್ದರು. ವಿವಿಧ ಇಲಾಖಾ ಧಿಕಾರಿಗಳು ಸೆ.೨೧ರವರೆಗೆ ಸಾಧಿಸಿದ ಪ್ರಗತಿಯನ್ನು ಸಭೆಯಲ್ಲಿ ಮಂಡಿಸಿದರು.