ಸೋಮವಾರಪೇಟೆ, ಅ. ೧೨: ಖಾಸಗಿ ಶಾಲೆಗಳ ಗಮನಕ್ಕೆ ತಾರದೇ ತಾಲೂಕಿನ ಕೆಲವೊಂದು ಖಾಸಗಿ ಶಾಲೆಗಳ ಲಾಗಿನ್ ಬಳಸಿ ವಿದ್ಯಾರ್ಥಿ ಗಳಿಗೆ ವರ್ಗಾವಣೆ ಪ್ರಮಾಣ ಪತ್ರ ನೀಡಲಾಗಿದೆ ಎಂದು ಆರೋಪಿಸಿರುವ ಸೋಮವಾರಪೇಟೆ ಆಂಗ್ಲ ಮಾಧ್ಯಮ ಶಾಲಾಡಳಿತ ಮಂಡಳಿ, ಸೈಬರ್ ಕ್ರೆöÊಂ ಹಾಗೂ ಶಾಸಕರಿಗೆ ದೂರು ನೀಡಿದೆ.

ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಎಸ್.ಎ.ಟಿ.ಎಸ್. ಶಾಲಾ ಲಾಗಿನ್‌ಗೆ ಸಂಬAಧಪಟ್ಟ ಮಾಹಿತಿಗಳು ಸೋರಿಕೆಯಾಗುತ್ತಿದ್ದು, ಶಾಲಾಡಳಿತದ ಗಮನಕ್ಕೆ ತಾರದೇ ವರ್ಗಾವಣೆ ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ ಎಂದು ಆಂಗ್ಲ ಮಾಧ್ಯಮ ಶಾಲಾಡಳಿತ ಮಂಡಳಿ(ಸೆಸ್ಮಾ) ಆರೋಪಿಸಿದ್ದು, ಈ ಬಗ್ಗೆ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಹಾಗೂ ಜಿಲ್ಲಾ ಸೈಬರ್ ಕ್ರೆöÊಂಗೆ ದೂರು ಸಲ್ಲಿಸಲಾಗಿದೆ.

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಶ್ರೀ ಸದಾಶಿವ ಸ್ವಾಮೀಜಿ ಆಂಗ್ಲಮಾಧ್ಯಮ

(ಮೊದಲ ಪುಟದಿಂದ) ಶಾಲೆ, ಕುಶಾಲನಗರದ ಯೂನಿಕ್ ಅಕಾಡೆಮಿ, ಶನಿವಾರಸಂತೆಯ ಕಾವೇರಿ ಶಾಲೆ, ಕೂಡುಮಂಗಳೂರಿನ ಕೆಇಎಸ್ ಕಿಶೋರ ಕೇಂದ್ರ ಸೇರಿದಂತೆ ಇನ್ನಿತರ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣ ಪತ್ರ ಕೋರಿ ಸದರಿ ಶಾಲೆಗಳಿಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳು ಶಾಲೆಯಲ್ಲಿರು ವಂತೆಯೇ, ಶಾಲೆಗಳ ಗಮನಕ್ಕೆ ತಾರದೇ ಅಂತರ್ಜಾಲದಲ್ಲಿ ಕಾನೂನು ಬಾಹಿರವಾಗಿ ವರ್ಗಾವಣೆ ಪತ್ರ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಶಾಲಾ ದಾಖಲಾತಿಗಳ ವಹಿ (ಲಡ್‌ಜರ್) ಅತೀ ಪ್ರಮುಖವಾಗಿದ್ದು, ಇದರ ಗೌಪ್ಯತೆಯನ್ನು ಖಾಸಗಿ ಶಾಲೆಗಳು ಕಾಪಾಡಿಕೊಂಡು ಬರುತ್ತಿವೆ. ಈ ನಡುವೆ ೨೦೨೦-೨೧ರ ಸಾಲಿನಲ್ಲಿ ಬಿಇಓ ಕಚೇರಿಯಿಂದ ವಿದ್ಯಾರ್ಥಿಗಳ ದಾಖಲಾತಿಗಳ ಗೌಪ್ಯತೆಗೆ ಧಕ್ಕೆಯಾಗುತ್ತಿದ್ದು, ಶಾಲೆಗಳ ಅನುಮತಿ ಪಡೆಯದೇ ಶಾಲೆಗಳ ಲಾಗಿನ್ ತೆಗೆದು ದಾಖಲೆಗಳನ್ನು ಬೇರೆ ಶಾಲೆಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದಾಗಿ ಖಾಸಗಿ ಶಾಲೆಗಳ ಲಾಗಿನ್‌ನಿಂದ ದಾಖಲಾತಿ ಸೋರಿಕೆಯಾಗುತ್ತಿದೆ ಎಂದು ಶಾಸಕರು ಹಾಗೂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾ ಹಿನ್ನೆಲೆ ಖಾಸಗಿ ಶಾಲೆಗಳು ತೀರಾ ಸಂಕಷ್ಟದ ಸ್ಥಿತಿಯಲ್ಲಿದ್ದು, ಹಲವಷ್ಟು ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದ ಶುಲ್ಕವನ್ನೂ ಭರಿಸಿಲ್ಲ. ಇಂತಹ ಪ್ರಕರಣಗಳಲ್ಲಿ ಕೆಲ ವಿದ್ಯಾರ್ಥಿಗಳು ತಾವು ಓದುತ್ತಿರುವ ಶಾಲೆಯಿಂದ ಬೇರೆ ಶಾಲೆಗಳಿಗೆ ವರ್ಗಾವಣೆ ಬಯಸಿದ್ದಾರೆ. ಹಿಂದಿನ ಶುಲ್ಕ ಪಾವತಿಸುವಂತೆ ಪೋಷಕರ ಮನವೊಲಿಸಲಾಗುತ್ತಿದೆ. ಈ ಶುಲ್ಕದಲ್ಲಿ ವಿನಾಯಿತಿಯನ್ನೂ ನೀಡಲಾಗುತ್ತಿದೆ. ಆದರೆ ಇದೀಗ ಅಂತರ್ಜಾಲದಲ್ಲಿ ವರ್ಗಾವಣೆ ಪ್ರಮಾಣ ಪತ್ರ ನೀಡುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಸೆಸ್ಮಾದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಬಾಕಿ ಶುಲ್ಕವನ್ನು (ವಿನಾಯಿತಿಯೊಂದಿಗೆ) ಪಾವತಿಸಿ ವರ್ಗಾವಣೆ ಪ್ರಮಾಣ ಪತ್ರ ಪಡೆಯುವಂತೆ ಪೋಷಕರಿಗೆ ಸೂಚಿಸಬೇಕೆಂದು ಈ ಹಿಂದೆಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ಸ್ಪಂದನ ದೊರಕಿಲ್ಲ. ಈ ನಡುವೆ ಖಾಸಗಿ ಶಾಲೆಗಳ ಲಾಗಿನ್ ಬಳಸಿ ದಾಖಲಾತಿ ಪಡೆಯಲಾಗುತ್ತಿದೆ. ಶಾಲೆಗಳ ಲಾಗಿನ್ ಮೂಲಕ ಹಲವಷ್ಟು ದಾಖಲೆಗಳು ಸೋರಿಕೆಯಾಗಿದ್ದು, ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಇದರೊಂದಿಗೆ ದೂರಿನ ಪ್ರತಿಯನ್ನು ಶಿಕ್ಷಣ ಸಚಿವರು, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಸಿ ಕಚೇರಿಗೂ ಸಲ್ಲಿಸಲಾಗಿದೆ.

ಸೋಮವಾರಪೇಟೆ ಆಂಗ್ಲ ಮಾಧ್ಯಮ ಶಾಲಾಡಳಿತ ಮಂಡಳಿಯ ಅಧ್ಯಕ್ಷ ದಾಮೋದರ್, ಕಾರ್ಯದರ್ಶಿ ಸುಜಲಾದೇವಿ, ಉಪಾಧ್ಯಕ್ಷ ಮೋಹನ್, ಪದಾಧಿಕಾರಿಗಳಾದ ಉಮಾ ಪ್ರಭಾಕರ್, ಮಣಿ, ರವಿ ಸೇರಿದಂತೆ ಇತರರು ಶಾಸಕ ಅಪ್ಪಚ್ಚು ರಂಜನ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸುವ ಮೂಲಕ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕಾನೂನಾತ್ಮಕವಾಗಿಯೇ ಟಿ.ಸಿ. ಕೊಟ್ಟಿದ್ದೇವೆ: ಬಿ.ಇ.ಓ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಆರ್ಥಿಕ ತೊಂದರೆಗೆ ಸಿಲುಕಿರುವ ತಾಲೂಕಿನ ೩೮೨ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿದ್ದ ಶಾಲೆಗಳಿಂದ ಬೇರೆ ಶಾಲೆ, ಬೇರೆ ಜಿಲ್ಲೆಯ ಶಾಲೆಗಳಿಗೆ ಸೇರ್ಪಡೆಗೊಳ್ಳಲು ವರ್ಗಾವಣೆ ಪ್ರಮಾಣ ಪತ್ರ ಕೇಳಿದ್ದಾರೆ. ಇದರಲ್ಲಿ ಹಲವಷ್ಟು ವಿದ್ಯಾರ್ಥಿಗಳು ಈಗಾಗಲೇ ಬೇರೆ ಶಾಲೆಗಳಿಗೆ ದಾಖಲಾಗಿದ್ದಾರೆ. ಇಂತಹ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣ ಪತ್ರ ನೀಡುವಂತೆ ಸಂಬAಧಪಟ್ಟ ಶಾಲೆಗಳಿಗೆ ಜ್ಞಾಪನಾ ಪತ್ರ, ಎರಡನೇ ನೋಟೀಸ್ ಮತ್ತು ಅಂತಿಮ ತಿಳುವಳಿಕೆ ಪತ್ರವನ್ನೂ ಕೊಟ್ಟಿದ್ದೇವೆ. ಆದರೆ ಹಲವಷ್ಟು ಶಾಲೆಗಳು ಇದಕ್ಕೆ ಸ್ಪಂದಿಸಿಲ್ಲ. ಪೋಷಕರು ಆಗಾಗ್ಗೆ ಕಚೇರಿ ಹಾಗೂ ಶಾಲೆಗಳಿಗೆ ಅಲೆಯುತ್ತಿದ್ದಾರೆ. ಈಗಾಗಲೇ ಬಿಇಓ ಕಚೇರಿಯ ಇಲಾಖಾ ಲಾಗಿನ್ ಮೂಲಕವೇ ೧೯ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿದ್ದೇವೆ. ಇದು ಕಾನೂನಾತ್ಮಕವಾಗಿಯೇ ಇದೆ. ಕೋವಿಡ್ ೧೯ನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳೂ ಸೇರಿದಂತೆ ಇತರ ೧೯ ವಿದ್ಯಾರ್ಥಿಗಳಿಗೆ ಟಿ.ಸಿ. ನೀಡಲಾಗಿದೆ. ಇಲಾಖಾ ವೆಬ್‌ಸೈಟ್‌ಗೆ ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲಾ ಮುಖ್ಯಸ್ಥರು ಅಪ್‌ಲೋಡ್ ಮಾಡಬೇಕು. ಇಲಾಖೆಯ ಎಸ್‌ಎಟಿಎಸ್ ವೆಬ್‌ಸೈಟ್ ಮೂಲಕವೇ ಟಿ.ಸಿ. ನೀಡಿದ್ದೇವೆ. ಶುಲ್ಕದ ವಸೂಲಾತಿ ವಿಚಾರ ಇಲಾಖೆಗೆ ಸಂಬAಧಪಟ್ಟಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಅವರು ‘ಶಕ್ತಿ’ಯೊಂದಿಗೆ ಅಭಿಪ್ರಾಯಿಸಿದ್ದಾರೆ.