ಮಡಿಕೇರಿ, ಅ. ೧೨: ಪಾಲಿಬೆಟ್ಟ ಪಟಾಣ್ ಬಾಬಾ ಶಾವಲಿ ಉರೂಸ್ ಫೆಬ್ರವರಿ ೧೧ ರಿಂದ ೧೪ ರವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ದ.ಕ ಕಾನೂನು ವೇದಿಕೆ ಅಧ್ಯಕ್ಷರಾಗಿ ಎಸ್.ಪಿ ಚಂಗಪ್ಪ
ಮಡಿಕೇರಿ, ಅ. ೧೨: ಮೂಲತಃ ಕೊಡಗು ಜಿಲ್ಲೆಯವರಾದ ಮಂಗಳೂರಿನಲ್ಲಿ ವಕೀಲರಾಗಿರುವ ಸೋಮೆಯಂಡ ಪಿ.ಚಂಗಪ್ಪ ಅವರು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ವೇದಿಕೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಚಂಗಪ್ಪ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಚಂಗಪ್ಪ ಅವರು ಈ ಹಿಂದೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ೪ ಅವಧಿಗೆ ಆಯ್ಕೆಯಾಗಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ೩ ಬಾರಿ ಹಾಗೂ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು.