ಸೋಮವಾರಪೇಟೆ,ಅ.೧೧: ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯದ ಎಂಬಿಎ ಪದವಿಯಲ್ಲಿ ಮೂರು ಚಿನ್ನದ ಪದಕ ಗಳಿಸಿದ ತಾಲೂಕಿನ ಮಾಲಂಬಿ ಗ್ರಾಮದ ವಿದ್ಯಾರ್ಥಿನಿ ಎಂ.ವಿ. ನಯನ ಅವರನ್ನು ಇಲ್ಲಿನ ಶಾಸಕರ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಎಂ.ಬಿ.ಎ. ಅಗ್ರಿ ಬಿಸಿನೆಸ್ ಮ್ಯಾನೇಜ್ಮೆಂಟ್ ಪದವಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ನಯನ ಅವರನ್ನು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಸನ್ಮಾನಿಸಿದರು. ಮಾರ್ಕೆಟ್ ಸಬ್ಜೆಕ್ಟ್ನಲ್ಲಿ ೧ ಹಾಗೂ ಓವರ್ ಆಲ್ ಮಾರ್ಕ್ ವಿಷಯದಲ್ಲಿ ೨ ಚಿನ್ನದ ಪದಕ ಪಡೆದಿರುವ ಈಕೆ ಮಾಲಂಬಿ ಗ್ರಾಮದ ವಿರೂಪಾಕ್ಷ ಹಾಗೂ ಪ್ರಮೀಳಾ ದಂಪತಿ ಪುತ್ರಿ.
ಈ ಸಂದರ್ಭ ಬಿಜೆಪಿ ಓಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಗಂಗಾಧರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಕಾರ್ಯದರ್ಶಿ ತಂಗಮ್ಮ, ಪ್ರಮುಖರಾದ ಲೋಕೇಶ್ವರಿ ಗೋಪಾಲ್, ಪ್ರಮುಖರಾದ ಎಸ್.ಆರ್. ಸೋಮೇಶ್, ರಮೇಶ್, ಹರಗ ಉದಯ ಸೇರಿದಂತೆ ಇತರರು ಉಪಸ್ಥಿತರಿದ್ದರು.