ಮಡಿಕೇರಿ, ಅ. ೧೧: ಕೊಡಗು ಯುವ ಸೇನೆಯ ಜಿಲ್ಲಾ ಉಪಾಧ್ಯಕ್ಷರಾಗಿ ಕೊರಕುಟ್ಟಿರ ಲತಾ ಬೋಪಯ್ಯ ಅವರನ್ನು ನೇಮಕ ಮಾಡಲಾಗಿದೆ.
ಯುವತಿಯರಿಗೆ ಹಾಗೂ ಮಾತೆಯರಿಗೆ ಸಂಘ-ಸAಸ್ಥೆಗಳಲ್ಲಿ ಸ್ಥಾನವನ್ನು ನೀಡಿ ಅವರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹಾಗೂ ಕೊರಕುಟ್ಟೀರ ಲತಾ ಬೋಪಯ್ಯ ಅವರು ಇನ್ನಿತರ ಸಂಘ-ಸAಸ್ಥೆಯಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ ಎಂದು ಯುವ ಸೇನೆಯ ಪ್ರಮುಖರಾದ ಕುಲದೀಪ್ ಪೂಣಚ್ಚ ಹಾಗೂ ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ತಿಳಿಸಿದ್ದಾರೆ.