ಸಿದ್ದಾಪುರ, ಅ. ೧೨: ಕೊಡಗು ಜಿಲ್ಲಾ ಎಸ್.ಎನ್.ಡಿ.ಪಿ ಯೂನಿಯನ್ ವತಿಯಿಂದ ಸಿದ್ದಾಪುರದ ಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಎಸ್.ಎನ್.ಡಿ.ಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಪುಣ್ಯ ಸ್ಮರಣೆಯ ಅಂಗವಾಗಿ ಸಂಘಟನೆಯ ಸದಸ್ಯರುಗಳ ಮುಖಾಂತರ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಆಸ್ಪತ್ರೆಯ ವೈದ್ಯರಾದ ಡಾ. ಕರುಂಬಯ್ಯ ಮಾತನಾಡಿ ರಕ್ತದಾನವು ಜೀವದಾನವಾಗಿದ್ದು, ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕೆಂದÀರು.

ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್.ಎನ್.ಡಿ.ಪಿ ಯೂನಿಯನ್ ಉಪಾಧ್ಯಕ್ಷ ಆರ್. ರಾಜನ್ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ್, ಪಂಚಾಯಿತಿ ಸದಸ್ಯರುಗಳಾದ ಸಿ.ವಿ ನಾರಾಯಣ, ಪಿ.ಸಿ ನಾರಾಯಣ, ಕೌನ್ಸಿಲರ್ ದಾಮೋದರ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೌಹಾರ್ದ ಸಂಘದ ನಿರ್ದೇಶಕರುಗಳಾದ ಎಂ.ಎ ಆನಂದ, ಗಿರೀಶ್ ಮಟ್ಟಂ, ಸತೀಶ್ ಟಿ, ರಾಧಾಕೃಷ್ಣ, ಸಿ ಅಶೋಕ, ಹರಿದಾಸ್, ಇನ್ನಿತರರು ಹಾಜರಿದ್ದರು. ಇದೇ ಸಂದÀರ್ಭ ೧೦೦ ಬಾರಿ ರಕ್ತದಾನ ಮಾಡಿದ ಲೋಕೇಶ್ ಹಾಗೂ ೩೬ ಬಾರಿ ರಕ್ತದಾನ ಮಾಡಿದ ಸುಕುಮಾರ್ ಅವರನ್ನು ಎಸ್.ಎನ್.ಡಿ.ಪಿ ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ರಕ್ತದಾನ ಮಾಡಿದವರಿಗೆ ಕಿರುಕಾಣಿಕೆ ನೀಡಲಾಯಿತು. ಪ್ರೇಮಾನಂದ ಸ್ವಾಗತಿಸಿ, ಲೋಕೇಶ್ ವಂದಿಸಿದರು.