ಮಡಿಕೇರಿ, ಅ. ೧೧: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಚೇರಂಬಾಣೆಯಲ್ಲಿ ಜಾಗೃತಿ ಕಾರ್ಯಕ್ರಮ ಜರುಗಿತು. ಕೊಡವ ಜನಾಂಗಕ್ಕೆ ದೊರಕಬೇಕಾಗಿರುವ ಬುಡಕಟ್ಟು ಸ್ಥಾನಮಾನ, ಭೂ-ರಾಜಕೀಯ ಸ್ವಾಯತ್ತತೆ, ಕೊಡವ ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಚೇದಕ್ಕೆ ಸೇರಿಸುವ ವಿಷಯಗಳ ಕುರಿತು ಚೇರಂಬಾಣೆಯ ಬೊಳ್ಳಾರಿಮಾಣಿ ಊರ್ ಮಂದ್ನಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಎನ್.ಸಿ ಅಧ್ಯಕ್ಷ ನಂದಿನೆರವAಡ ಯು.ನಾಚಪ್ಪ ವಹಿಸಿದ್ದರು. ಮಂದಪAಡ ಮನೋಜ್ ಸ್ವಾಗತಿಸಿದರು. ಪಟ್ಟಮಾಡ ಕುಶ ವಂದಿಸಿದರು. ಸುಮಾರು ೬೦ ಮಂದಿ ಕೊಡವ ಜನಾಂಗದ ಬಾಂಧವರು ಕಾರ್ಯಕ್ರಮದಲ್ಲಿ ಹಾಜರಿದ್ದು ಸಿ.ಎನ್.ಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.