ಮಡಿಕೇರಿ, ಅ.೧೧: ಪೊನ್ನಂಪೇಟೆ, ಬಿರುನಾಣಿ ಎಕ್ಸ್ಪ್ರೆಸ್, ಮೇಕೂರು ಮತ್ತು ಹೆಗ್ಗಳ ವಿದ್ಯುತ್ ಮಾರ್ಗಗಳಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ತಾ. ೧೩ ರಂದು ಬೆಳಗ್ಗೆ ೯.೩೦ ಗಂಟೆಯಿAದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.

ಆದ್ದರಿಂದ ಪೊನ್ನಂಪೇಟೆ ಟೌನ್, ಹಳ್ಳಿಗಟ್ಟು, ನೆಮ್ಮಲೆ, ಕೆ.ಕೆ.ಆರ್, ಪೂಕೊಳ, ಮೇಕೂರು, ವಡ್ಡರಕಾಡು, ಹೆಗ್ಗಳ, ಆರ್ಜಿ, ಬೂದಿಮಾಳ, ತೋರ, ರಾಮನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಕೋರಿದ್ದಾರೆ.